ಬಂಟ್ವಾಳ:ದೇಶದಲ್ಲಿ ಒಟ್ಟು 10 ಕೋಟಿ ಎಲ್‍ಪಿಜಿ ಸಂಪರ್ಕ ರಹಿತ ಮನೆಗಳಿದ್ದು ಕಳೆದ 15 ತಿಂಗಳಿನಲ್ಲಿ ಒಟ್ಟು 2.56ಕೋಟಿ ಮನೆಗಳಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಉಚಿತ ಎಲ್‍ಪಿಜಿ ಸಂಪರ್ಕ ನೀಡಲಾಗಿದೆ. ಮುಂದಿನ 36 ತಿಂಗಳಿನಲ್ಲಿ ಮತ್ತೆ ಐದು ಕೋಟಿ ಮನೆಗಳಿಗೆ ಉಚಿತ ಎಲ್‍ಪಿಜಿ ಸಂಪರ್ಕ ಸಹಿತ ಸ್ಟೌವ್ ಮತ್ತು ಸುರಕ್ಷಾ ಪೈಪ್ ವಿತರಿಸುವ ಗುರಿ ಹೊಂದಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.

IMG-20170723-WA0004
ತಾಲ್ಲೂಕಿನ ಬ್ರಹ್ಮರಕೂಟ್ಲು ಸಮೀಪದ ಬಂಟರ ಭವನದಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಮಂಜೂರಾದ ಉಚಿತ ಎಲ್‍ಪಿಜಿ ಸಂಪರ್ಕ ಮತ್ತಿತರ ಸವಲತ್ತು ಭಾನುವಾರ ವಿತರಿಸಿ ಅವರು ಮಾತನಾಡಿದರು. ಈ ಜಿಲ್ಲೆಯಲ್ಲಿ ಒಟ್ಟು 46 ಮಂದಿ ವಿತರಕರ ಮೂಲಕ ಒಟ್ಟು 44 ಸಾವಿರ ಮಂದಿ ಅರ್ಹ ಫಲಾನುಭವಿಗಳಿಗೆ ಉಚಿತ ಎಲ್‍ಪಿಜಿ ಸಂಪರ್ಕ ನೀಡಬೇಕಾಗಿದ್ದು, ಈ ಪೈಕಿ ಈಗಾಗಲೇ ಒಟ್ಟು 4,200 ಮಂದಿಗೆ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಅನಿಲ ವಿತರಕರು ಮತ್ತು ಅಧಿಕಾರಿಗಳು ಹಾಗೂ ಸ್ಥಳೀಯ ಕಾರ್ಯಕರ್ತರು ಪ್ರತೀ ಮನೆ ಮನೆಗೆ ಭೇಟಿ ನೀಡಿ ಅರ್ಹ ಫಲಾನುಭವಿಗಳನ್ನು ಗುರುತಿಸುವ ಮೂಲಕ ‘ಹೊಗೆಮುಕ್ತ ಜಿಲ್ಲೆಯಾಗಿ ಪರಿವರ್ತನೆಗೊಳಿಸಬೇಕು. ಇದೇ ರೀತಿ ‘ಹೊಗೆಮುಕ್ತ ಗ್ರಾಮ’ ನಿರ್ಮಾಣಕ್ಕೆ ಶ್ರಮಿಸಿದಾಗ ಆ ಗ್ರಾಮಕ್ಕೆ ರೂ ಒಂದು ಲಕ್ಷ ಮೊತ್ತದ ಬಹುಮಾನ ನೀಡುವುದಾಗಿ ಅವರು ಪ್ರಕಟಿಸಿದರು.2

ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಭಕ್ತಿ ಮತ್ತು ಮಾತೃಭಕ್ತಿಗೆ ಪೂರಕವಾಗಿ ಈ ಯೋಜನೆ ರೂಪಿಸಿದ್ದು, ಇದಕ್ಕಾಗಿ ಒಟ್ಟು 4ಕೋಟಿ ಮಂದಿ ಸ್ವಯಂ ಪ್ರೇರಣೆಯಿಂದ ಎಲ್‍ಪಿಜಿಗೆ ಸಿಲಿಂಡರ್‍ಗೆ ಪಡೆಯುತ್ತಿದ್ದ ಸಬ್ಸಿಡಿ ಮೊತ್ತವನ್ನು ತ್ಯಜಿಸಿದ್ದಾರೆ. ಕಳೆದ 2011ರಲ್ಲಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಕೇವಲ ಎರಡು ತಿಂಗಳೊಳಗೆ ಎಲ್‍ಪಿಜಿ ಸೌಲಭ್ಯ ನೀಡಲಾಗುತ್ತಿದ್ದು, ಇದೀಗ ಸಲ್ಲಿಸುವ ಅರ್ಜಿದಾರರಿಗೆ ಮುಂದಿನ ದೀಪಾವಳಿಯೊಳಗೆ ‘ಉಜ್ವಲ ಪ್ಲಸ್’ ಯೋಜನೆಯಡಿ ವಿತರಿಸುವ ಗುರಿ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು. ಈ ಫಲಾನುಭವಿಗಳಿಗೆ ಬ್ಯಾಂಕಿನ ಜನ್‍ಧನ್ ಖಾತೆ ಮೂಲಕ ಎಲ್‍ಪಿಜಿ ಸಬ್ಸಿಡಿ ಹಣ ಪಾವತಿಯಾಗಲಿದೆ ಎಂದರು.

1 (2)
ಕೇಂದ್ರ ಸರ್ಕಾರದ ಈ ಉಜ್ವಲ ಉಚಿತ ಎಲ್‍ಪಿಜಿ ವಿತರಣೆ ಯೋಜನೆಯನ್ನು ರಾಜ್ಯ ಸರ್ಕಾರವು ಅನಿಲ ಭಾಗ್ಯವಾಗಿ ನೀಡಲು ಮುಂದಾಗಿದೆ ಎಂದು ಆರೋಪಿಸಿದರು.
ಈ ಜಿಲ್ಲೆಯಲ್ಲಿ ಯುವ ಉದ್ದಿಮೆದಾರರಿಗೆ ಮುದ್ರಾ ಬ್ಯಾಂಕ್ ಯೋಜನೆಯಡಿ ಒಟ್ಟು 2,800 ಕೋಟಿ ಮೊತ್ತದ ಸಾಲ ವಿತರಿಸಲಾಗಿದ್ದು, ಮಹಿಳಾ ಉದ್ಯಮಿಗಳಿಗೆ ರೂ 1 ಕೋಟಿ ಮೊತ್ತದ ಸಾಲ ವಿತರಿಸಲಾಗುತ್ತಿದೆ ಎಂದು ವಿವರಿಸಿದರು.ಮಾಜಿ ಸಚಿವ, ವಿಧಾನರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕೇಂದ್ರ ಸರ್ಕಾರವು ನೀಡುತ್ತಿರುವ ಗರಿಷ್ಟ ಮೊತ್ತದ ಅನುದಾನದಿಂದ ರಾಜ್ಯ ಸರ್ಕಾರವು ವಿವಿಧ ಭಾಗ್ಯಗಳನ್ನು ಘೋಷಿಸುತ್ತಿದೆ ಎಂದರು.

ಸುಳ್ಯ ಶಾಸಕ ಎಸ್.ಅಂಗಾರ ಮಾತನಾಡಿ, ಮಾಜಿ ಪ್ರಧಾನಿ ಅಟಲ್ ಇಹಾರಿ ವಾಜಪೇಯಿ ಮತ್ತು ಹಾಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಆಡಳಿತಾವಧಿಯಲ್ಲಿ ಎಲ್‍ಪಿಜಿ ಸಂಪರ್ಕ ಮುಕ್ತವಾಗಿ ದೊರೆತಿದ್ದು, ಈ ಹಿಂದಿನ ಯುಪಿಎ ಸರ್ಕಾರ ಆಡಳಿತಾವಧಿಯಲ್ಲಿ ಅಡುಗೆ ಅನಿಲ ಸಮಸ್ಯೆ ಗಣನೀಯವಾಗಿತ್ತು ಎಂದರು.ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಕ್ಯಾಂಪ್ಕೊ ಮಾಜಿ ನಿರ್ದೇಶಕ ಸಂಜೀವ ಮಠಂದೂರು, ಎಚ್‍ಪಿಸಿಎಲ್ ವಿಭಾಗೀಯ ಹಿರಿಯ ಪ್ರಬಂಧಕ ಎನ್.ರಮೇಶ್ ಮತ್ತಿತರರು ಇದ್ದರು.

ಪ್ರಗತಿಪರ ಕೃಷಿಕ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಸ್ವಾಗತಿಸಿದರು. ಉಜ್ವಲ್ ಯೋಜನೆ ಜಿಲ್ಲಾ ನೋಡೆಲ್ ಅಧಿಕಾರಿ ನವೀನ್ ಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಪುರಸಭಾ ಸದಸ್ಯ ಬಿ.ದೇವದಾಸ ಶೆಟ್ಟಿ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

ಮುಖ್ಯಾಂಶಗಳು:
ಆರಂಭದಲ್ಲಿ ಇಲ್ಲಿನ ನರಿಕೊಂಬು ಗ್ರಾಮ ನಿವಾಸಿ ದೇವಕಿ ಎಂಬವರ ಮನೆಗೆ ತೆರಳಿ ಉಚಿತ ಅಡುಗೆ ಅನಿಲ ಸಂಪರ್ಕ ಮತ್ತಿತರ ಸವಲತ್ತು ವಿತರಿಸಿದ ಬಳಿಕ ಗ್ರಾಹಕರಿಗೆ ವಿತರಕರಿಂದ ಪ್ರಾತ್ಯಕ್ಷಿತೆ ನೀಡಲಾಯಿತು.
ವೇದಿಕೆಯಲ್ಲಿ ಅತಿಥಿಗಳಿಗೆ ವಾಸ್ತುಗಿಡ ನೀಡಿ ಸ್ವಾಗತ ಮತ್ತು ಅಡುಗೆ ಅನಿಲ ವಿತರಕರಿಗೆ ಖಾದಿ ವಸ್ತ್ರ ನೀಡಿ ಗೌರವಿಸಲಾಯಿತು. ವೇದಿಕೆ ಹಿಂಬದಿ ಳವಡಿಸಿದ್ದ ಬೃಹತ್ ಡಿಜಿಟಲ್ ಪರದೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ಮತ್ತು ಯೋಜನೆ ಧ್ಯೇಯೋದ್ದೇಶ ಬಗ್ಗೆ ಮಾಹಿತಿ ಪ್ರಸಾರಗೊಳಿಸಲಾಯಿತು.
ಸಭಾಂಗಣದಲ್ಲಿ ಮಹಿಳೆಯರು ಸಹಿತ ಅಪಾರ ಮಂದಿ ನಾಗರಿಕರು ಕಿಕ್ಕಿರಿದು ಸೇರಿದ್ದು, ಸಭಾಂಗಣ ಕೆಳಗೆ ಸಾವಿರಾರು ಮಂದಿ ಹೊಸ ಅರ್ಜಿ ಸಲ್ಲಿಸುತ್ತಿರುವ ದೃಶ್ಯ ಕಂಡು ಬಂದಿದೆ.

By suddi9

Leave a Reply

Your email address will not be published. Required fields are marked *