ಬಂಟ್ವಾಳ : ಬಂಟ್ವಾಳ ತಾಲೂಕು ಗಾಣಿಗರ ಸೇವಾ ಸಂಘದ ಆಶ್ರಯದಲ್ಲಿ ಆಟಿಡೊಂಜಿ ಕೂಟ ಕಾರ್ಯಕ್ರಮ ಪಾಣೆಮಂಗಳೂರಿನ ಸುಮಂಗಲಾ ಹಾಲ್‍ನಲ್ಲಿ ಸತ್ಯಶ್ರೀ ಫೈನಾನ್ಸ್‍ನ ಮಾಲಕ ಬಿ. ಕೃಷ್ಣಪ್ಪ ಬಂಗೇರ ದೀಪ ಬೆಳಗಿಸಿ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಬಂಟ್ವಾಳ ತಾಲೂಕು ಗಾಣಿಗರ ಸೇವಾ ಸಂಘದ ಅಧ್ಯಕ್ಷರಾದ ರಘು ಸಪಲ್ಯರವರು ವಹಿಸಿ ಮಾತನಾಡಿ ನಮ್ಮ ಪರಂಪರೆ, ಸಂಸ್ಕøತಿ, ಮಾಯವಾಗುತ್ತಿರುವ ಈ ಕಾಲ ಘಟ್ಟದಲ್ಲಿ ನಮ್ಮ ಯುವ ಪೀಳಿಗೆಗೆ ನಮ್ಮ ಸಂಸ್ಕøತಿಯನ್ನು ಪರಿಚಯಿಸುವ ಈ ಕೆಲಸವನ್ನು ಮಾಡಬೇಕಾದುದು ನಮ್ಮ ಕರ್ತವ್ಯ ಎಂದರು.
ಸಾವಿರಾರು ದೈವ ದೇವರುಗಳ ನೆಲೆ ಬೀಡಾದ ಈ ತುಳುನಾಡಿನಲ್ಲಿ ಕೃಷಿ ನಾಶದೊಂದಿಗೆ ನಮ್ಮ ಸಂಸ್ಕøತಿಯು ನಾಶವಾಗುತ್ತಿದೆ. ತುಳುನಾಡಿನ ಸಂಸ್ಕøತಿ ಪರಂಪರೆಯನ್ನು ಮತ್ತೊಮ್ಮೆ ಮುಂದಿನ ಪೀಳಿಗೆಗೆ ತೋರಿಸುವ ಕೆಲಸ ಈ ಕಾರ್ಯಕ್ರಮದ ಮೂಲಕ ಆಗಬೇಕಾಗಿದೆ. ಇಂದಿನ ಮಕ್ಕಳು ಫಾಸ್ಟ್‍ಫುಡ್ ಹಾಗೂ ಟೇಸ್ಟ್‍ಫುಡ್ ದೂರವಿರಿಸಿ ಅರೋಗ್ಯವರ್ಧಕವಾದ ಸೊಪ್ಪು ತರಕಾರಿಯತ್ತ ಒಲವು ತೋರಿಸುವುದು ಉತ್ತಮ ಎಂದು ಅವರು ಕಿವಿ ಮಾತು ಹೇಳಿದರು.
ಸಮಾರಂಭದಲ್ಲಿ ಅತಿಥಿಗಳಾಗಿ ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಯಶೋಧರ ಕರ್ಬೆಟ್ಟು ಡಿ.ಪಿ. ಸದಸ್ಯರಾದ ಉಮೇಶ್ ಬೋಳಂತೂರು ಕೃಷ್ಣ ಗಾಣಿಗ, ಬಂಟ್ವಾಳ ತಾಲೂಕು ಗಾಣಿಗರ ಸೇವಾ ಸಂಘದ ಕಾರ್ಯದರ್ಶಿ ವೇದವ, ಕೋಶಾಧಿಕಾರಿ ಈಶ್ವರ್ ಆರ್.ಕೆ. ಮೆಲ್ಕಾರ್, ನಿತ್ಯಾನಂಧ ಕುರ್ಚಿಪಳ್ಳ , ದಿನೇಶ್ ಬಂಗೇರ ಬೋಳಂತೂರು ಮತ್ತು ಮಹಿಳಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿವಿಧ ತುಳು ಸಂಸ್ಕøತಿಯ ವಿನೋದವಾಳಿಗಳು ನಡೆಯಿತು. ವಿಶ್ವನಾಥ ಎಸ್.ಎ.ಸ್ವಾಗತಿಸಿ ಬಾಲಕೃಷ್ಣ ಸೆರ್ಕಳ ವಂದಿಸಿದರು. ವಿಜಯ ಅವರು ಕಾರ್ಯಕ್ರಮ ನಿರೂಪಿಸಿದರು.
