ವಿಟ್ಲ : ಯುವ ಕುಂಬಾರರ ಯಾನೆ ಕುಲಾಲರ ಸಂಘ ವಿಟ್ಲ ಇದರ ಆಶ್ರಯದಲ್ಲಿ ಆಟಿಡೊಂಜಿ ಗಮ್ಮತ್, ವನಮಹೋತ್ಸವ ಮತ್ತು ಸ್ವಜಾತಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ವಿಟ್ಲ ದ ಕ ಜಿ ಪಂ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾ ಭವನದಲ್ಲಿ ನಡೆಯಿತು._49A1407(1)

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಗಳಾಗಿ ಪುತ್ತೂರು ವಿವೇಕಾನಂದ ಕಾಲೇಜಿನ ಉಪನ್ಯಾಸಕ ಡಾ| ರೋಹಿಣಾಕ್ಷ ಶಿರ್ಲಾಲು, ಸಂಕಪ್ಪ ಮೂಲ್ಯ ಆಲಂಗಾರು ಇವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಛಾಯಾಗ್ರಾಹಕ ಕೇಶವ ವಿಟ್ಲ ಮತ್ತು ನಿವೃತ್ತ ಸೈನಿಕ ಶಿವಪ್ರಕಾಶ್ ಕುವೆತ್ತಿಲ ಇವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಉಮೇಶ್ ಕುಲಾಲ್ ಮತ್ತು ಕಾರ್ಯದರ್ಶಿ ವಿಜಯ್ ಕುಲಾಲ್ ವೇದಿಕೆಯಲ್ಲಿದ್ದರು. ವಿನೋದ್ ಕುಲಾಲ್ ಸ್ವಾಗತಿಸಿದರು. ಸುಶ್ಮಾ ಕಟ್ಟೆ ವಂದಿಸಿದರು. ಸೋಮನಾಥ್ ಕುವೆತ್ತಿಲ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *