ಸುದ್ದಿ9ಬಜಪೆ: ಠಾಣಾ ವ್ಯಾಪಿಯ ಎಕ್ಕಾರ್ ಎಂಬಲ್ಲಿ ಮೆಸ್ಕಾಂ ಲೈನ್;ಮೆನ್ ವಿದ್ಯುತ್ ಶಾಕ್;ಗೆ ತುತ್ತಾಗಿ ದಾರುಣ ಸಾವನ್ನಪ್ಪಿದ ಘಟನೆ ಇಂದು ಸಂಜೆ 5 ಗಂಟೆಯ ಸುಮಾರಿಗೆ ಸಂಭವಿಸಿದೆ. ಮೃತರನ್ನು ಎಕ್ಕಾರ್ ನಿವಾಸಿ ವೀರೇಶ್ ಎಂದು ಹೆಸರಿಸಲಾಗಿದೆ. ಎಕ್ಕಾರ್ ಎಂಬಲ್ಲಿ ವಿದ್ಯುತ್ ಲೈನ್ ಸಮಸ್ಯೆಯಿದ್ದು ಅದನ್ನು ಸರಿಪಡಿಸಲೆಂದು ಮೆಸ್ಕಾಂ ಲೈನ್ ದುರ್ಗಾಪ್ರಸಾದ್ ಹಾಗೂ ವೀರೇಶ್ ಹೋಗಿದ್ದರು. ದುರ್ಗಾ ವಿದ್ಯುತ್ ತಂತಿಯ ಕನೆಕ್ಷನ್ ತೆಗೆದಿದ್ದಾಗಿ ಹೇಳಿದ್ದು ವೀರೇಶ್ ತಂತಿಕಂಬವನ್ನು ಹತ್ತಿದ್ದರು. ಈ ವೇಳೆ ಏಕಾಏಕಿ ವಿದ್ಯುತ್ ಪ್ರವಹಿಸಿ ವೀರೇಶ್ ಕೆಳಗಡೆ ಎಸೆಯಲ್ಪಟ್ಟರು. ಕೆಳಗಡೆಯಿದ್ದ ಬಂಡೆಗಲ್ಲು ಅವರ ತಲೆಗೆ ಬಡಿದಿದ್ದು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ದುರ್ಗಾಪ್ರಸಾದ್ ಬೇಜವಾಬ್ದಾರಿಯಿಂದ ವೀರೇಶ್ ತಂತಿಕಂಬದಲ್ಲಿರುವಾಗಲೇ ವಿದ್ಯುತ್ ಛಾರ್ಜ್ ಮಾಡಿದ್ದೇ ಘಟನೆಗೆ ಕಾರಣವೆನ್ನಲಾಗಿದೆ. ಮೆಸ್ಕಾಂ ನಿರ್ಲಕ್ಷ್ಯಕ್ಕೆ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

