ಮಂಗಳೂರು: ವಳಚ್ಚಿಲ್ ಎಕ್ಸ್ ಪರ್ಟ್ ಪದವಿಪೂರ್ವ ಕಾಲೇಜಿನ ಹಲರ್ನಕರ್ ನೀತ್ಯ ನೀಲಕಾಂತ್ 100 ಮತ್ತು 50 ಮೀಟರ್ ಬ್ಯಾಕ್‍ಸ್ಟ್ರೋಕ್ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಈಜು ಚಾಂಪಿಯನ್‍ಶಿಪ್‍ನಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.

Expert Swimming champianship

Expert Swimming champianship2 ಉಜಿರೆ ಎಸ್‍ಡಿಎಂ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಈಜು ಚಾಂಪಿಯನ್‍ಶಿಪ್‍ನಲ್ಲಿ ನೀಲಕಾಂತ್ 50 ಮೀಟರ್ ಬ್ರೆಸ್ಟ್‍ಸ್ಟ್ರೋಕ್ ವಿಭಾಗದಲ್ಲಿ ದ್ವಿತೀಯ ಸ್ಥಾನಕ್ಕೆ ಪಾತ್ರರಾಗಿದ್ದಾರೆ.ಎಕ್ಸ್ ಪರ್ಟ್ ಕಾಲೇಜಿನ ವಿದ್ಯಾರ್ಥಿಗಳಾದ ರೋಶನ್ ಜೆ. 100 ಮತ್ತು 50 ಮೀಟರ್ ಬ್ಯಾಕ್‍ಸ್ಟ್ರೋಕ್ ದ್ವಿತೀಯ, ಶ್ರೇಯಾ ಸೋಮಶೇಖರ್ ಕೆರುಡಿ 50 ಮೀಟರ್ ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ ತೃತೀಯ ಗಳಿಸಿದ್ದಾರೆ. 400 ಮೀಟರ್ ಹುಡುಗರ ಫ್ರೀಸ್ಟೈಲ್ ರಿಲೇ ಯಲ್ಲಿ ರೋಶನ್ ಜೆ, ಅಶ್ವಿನ್ ಎಚ್. ಜಿ, ಯುವರಾಜ್ ಎ.ಎನ್, ಅತಿಶಯ್ ಎಸ್. ಜಿ. ತೃತೀಯ ಸ್ಥಾನ ಗಳಿಸಿದ್ದಾರೆ.ವಿಜೇತರನ್ನು ಎಕ್ಸ್ ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ.ನರೇಂದ್ರ ಎಲ್.ನಾಯಕ್, ಉಪಾಧ್ಯಕ್ಷೆ ಉಷಾಪ್ರಭಾ ಎನ್. ನಾಯಕ್ ಮತ್ತು ಪ್ರಾಂಶುಪಾಲ ಡಾ.ಎನ್.ಕೆ.ವಿಜಯನ್ ಅವರು ಅಭಿನಂದಿದ್ದಾರೆ.

By suddi9

Leave a Reply

Your email address will not be published. Required fields are marked *