ಬಂಟ್ವಾಳ: ತಾಲೂಕಿನ ಕಡೇಶಿವಾಲಯ  ಶ್ರೀ ಲಕ್ಮಿನರಸಂಹ ದೇವಸ್ಥಾನಕ್ಕೆ  ಕಳ್ಳರು ನುಗ್ಗಿ ಲಕ್ಷಾಂತರ ರೂ ಮೌಲ್ಯದ ನಗ ನಗದುನ್ನು ಕಳವುಗೈದ ಘಟನೆ ಬೆಳಕಿಗೆ ಬಂದಿದೆ. ದೇವಸ್ಥಾನ ದ ಮುಂಬಾಗಿಲು ಮುರಿದು ಒಳ ಪ್ರವೇಶಿಸಿದ  ಕಳ್ಳರು ಮುಖ್ಯ ದೇವರ ಗರ್ಭ ಗುಡಿಯ ಬಾಗಿಲು ಮುರಿದು ಒಳ ನುಗ್ಗಿ ಪ್ರದಾನ ದೇವರ ಮೂರ್ತಿಯನ್ನು ಮತ್ತು ಉಳಿದ ದೇವರ ಗುಡಿಯಲ್ಲಿದ್ದ ಮೂರ್ತಿಗಳನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ. ಕಳವುಗೈದ ವಸ್ತುಗಳ ಮೌಲ್ಯ ೫ ಲಕ್ಷ ರೂ.  ಎಂದು ಅಂದಾಜಿಸಲಾಗಿದೆ.IMG-20170911-WA0029

IMG-20170911-WA0030

IMG-20170911-WA0031

ದೇವಸ್ಥಾನದ ಸಿಸಿ ಕ್ಯಾಮಾರವನ್ನು ಹಾನಿಗೈದಿರುವ  ಕಳ್ಳ ರು ಅದರ ಪೂಟೇಜ್ಗಳನ್ನು ಕದ್ದೊಯ್ದಿದ್ದಾರೆ ಎಂದು ತಿಳಿದು ಬಂದಿದೆ. ದೇವಸ್ಥಾನ ದ ಅರ್ಚಕರು ಬೆಳಿಗ್ಗೆ ಪೂಜೆ ಗೆಂದು ಬಂದಾಗ ಈ ಘಟನೆ ಬೆಳಕಿಗೆ  ಬಂದಿದೆ. ಅ ಬಳಿಕ ಬಂಟ್ವಾಳ ಗ್ರಾಮಾಂತರ ಠಾಣೆಗೆ ಮಾಹಿತಿ ನೀಡಲಾಗಿದ್ದು. ಬಂಟ್ವಾಳ  ಗ್ರಾಮಾಂತರ ಠಾಣೆಯ ಎಸ್. ಐ ಉಮೇಶ್ ಮತ್ತವರ  ಸಿಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳ ಕ್ಕೆ ಸ್ವಾನ ದಳ ಮತ್ತು ಬೆರಳಚ್ಚು ತಜ್ಞರನ್ನು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ..

By suddi9

Leave a Reply

Your email address will not be published. Required fields are marked *