ಬಂಟ್ವಾಳ:ಶ್ರೀ ಗುರು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ (ನಿ.) ಬಿರ್ವಸೆಂಟರ್ ಮೆಲ್ಕಾರ್ ಪಾಣೆಮಂಗಳೂರು ಇದರ 2016-17 ನೇ ಸಾಲಿನ ವಾರ್ಷಿಕ ಮಹಾಸಭೆಯು ದಿನಾಂಕ :- 11-09-2017 ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 11 ಕ್ಕೆ ಸಂಘದ ಆವರಣದಲ್ಲಿ ಅಧ್ಯಕ್ಷರಾದ ಶ್ರೀ. ಕೆ. ಸೇಸಪ್ಪ ಕೋಟ್ಯಾನ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ ನಿರ್ದೇಶಕರಾದ ಶ್ರೀ. ಕೆ. ಸಂಜೀವ ಪೂಜಾರಿಯವರು ಮಾತನಾಡುತ್ತಾ ಸಂಘವು 2016-17 ನೇ ಸಾಲಿನ ಮಾರ್ಚ್ ತಿಂಗಳ ಕೊನೆಗೆ 7 ಕೋಟಿ ರೂ. ಠೇವಣಿ ಸಂಗ್ರಹಿಸಿ 6 ಕೋಟಿ 50 ಲಕ್ಷ ರೂ. ಗಳ ಸಾಲ ನೀಡಲಾಗಿದೆ. ಮುಂದಿನ ವರ್ಷದಲ್ಲಿ 9 ಕೋಟಿ ಠೇವಣಿ ಸಂಗ್ರಹಣ ಗುರಿ ಹೊಂದಲಾಗಿದೆ . ಈ ವರ್ಷ ಉಳಿ ಗ್ರಾಮದ ಕಕ್ಯಪದವು ಹಾಗೂ ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ಎಂಬಲ್ಲಿ ಹೊಸ ಶಾಖೆ ತೆರೆಯುವ ಬಗ್ಗೆ ಮತ್ತು ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

KAR_9261KAR_9271ಸಂಘದ ವರದಿ ಮತ್ತು ಲೆಕ್ಕಪತ್ರಗಳನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಸಭೆಯಲ್ಲಿ ಮಂಡಿಸಿದರು. ಸಂಘವು 2016-17 ನೇ ಸಾಲಿನಲ್ಲಿ ಒಟ್ಟು ಸುಮಾರು 30 ಕೋಟಿ ರೂ. ವ್ಯವಹಾರವನ್ನು ಮಾಡಿದ್ದು 9,09,023/– ರೂ. ನಿವ್ವಳ ಲಾಭ ಗಳಿಸಿದ್ದು ಸದಸ್ಯರಿಗೆ ಶೇ.13% ರಂತೆ ಡಿವಿಡೆಂಡ್ ನೀಡುವುದೆಂದು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು . ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ . ಕೆ. ಹರಿಕೃಷ್ಣ ಬಂಟ್ವಾಳ್, ರತ್ನಾಕರ ನಾಡಾರು , ನಾರಾಯಣ ಪೂಜಾರಿ ಬೊಳ್ಳುಕಲ್ಲು, , ಉಮೇಶ್ ಸುವರ್ಣ ತುಂಬೆ , ರತ್ನಾಕರ ಪೂಜಾರಿ ಮೆಲ್ಕಾರ್ , ಶ್ರೀಮತಿ. ಪುಷ್ಪಾವತಿ, ಶ್ರೀಮತಿ ತುಳಸಿ ಇರಾ ಉಪಸ್ಥಿತರಿದ್ದರು. ಸಂಘದ ನಿರ್ದೇಶಕರಾದ ರಮೇಶ್ ಅನ್ನಪ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು ಮತ್ತು ನಿರ್ದೇಶಕರಾದ ಸಂತೋಷ್ ಕುಮಾರ್ ಕೊಟ್ಟಿಂಜ, ವಂದನಾರ್ಪಣೆಗೈದರು.

By suddi9

Leave a Reply

Your email address will not be published. Required fields are marked *