ಬಂಟ್ವಾಳ | ಪ್ರಾಚೀನ ಭಾರತೀಯ ವಿಜ್ಞಾನ ಆಧುನಿಕ ವಿಜ್ಞಾನಕ್ಕೆ ಮೂಲ ಎಂದು ಮಂಗಳೂರು ಶ್ರೀ ಭಾರತಿ ಪದವಿ ಕಾಲೇಜು ಪ್ರಾಂಶುಪಾಲ ಡಾ. ಈಶ್ವರ ಪ್ರಸಾದ್ ಹೇಳಿದರು.
ಅವರು ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜಿನ ಸಂಸ್ಕøತ ಸಂಘದ ಆಶ್ರಯದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.ಜೀವನಶೈಲಿ, ಆರೋಗ್ಯ, ಆಚಾರ-ವಿಚಾರ, ರೂಢಿ-ಸಂಪ್ರದಾಯ, ಮೂಢನಂಬಿಕೆ ಮುಂತಾದ ವಿಷಯದ ಆಧಾರದ ಮೇಲೆ ಹುಟ್ಟಿಕೊಂಡ ಕಾವ್ಯಗಳು ಪ್ರಸ್ತುತ ಜಗತ್ತನೇ ಬದಲಾಯಿಸಿವೆ. ಭಾರತದ ಪ್ರಾಚೀನ ಕಾಲದ ಸಾಹಿತ್ಯ ಕೃತಿಗಳಿಂದ ಬೆಳಕಿಗೆ ಬಂದ ಪುಷ್ಪಕ ವಿಮಾನ, ಸಸ್ಯವಿಜ್ಞಾನ, ಪ್ರಣಾಳ ಶಿಶು, ಚಿಕಿತ್ಸಾ ವಿಧಾನಗಳು ಇಡೀ ಜೀವಸಂಕುಲದ ಮೇಲೆ ಪರಿಣಾಮ ಬೀರಿದೆ. ಆಧುನಿಕ ವಿಜ್ಞಾನಿಗಳು ಸಮಾಜ ಸ್ಥಿತಿಗತಿಗೆ ಅನುಗುಣವಾಗಿ ಹೊಸ ರೂಪುರೇಖೆ ಕೊಟ್ಟು ಆಧುನಿಕ ಶೈಲಿಯಲ್ಲಿ ಮಾರ್ಪಾಡುಗಳನ್ನು ಮಾಡಿ ನವೀನ ಆವಿಷ್ಕಾರ ಕೈಗೊಂಡಿದ್ದಾರೆ ಎಂದು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ತೋರಿಸಿ ಹೇಳಿದರು. BTL 01 (2)
ಎಸ್.ವಿ.ಎಸ್ ಪ. ಪೂ. ಕಾಲೇಜು ಪ್ರಾಂಶುಪಾಲೆ ಶಶಿಕಲಾ ಕೆ. ಅಧ್ಯಕ್ಷತೆ ವಹಿಸಿದರು. ವಿದ್ಯಾರ್ಥಿನಿ ಮಾನಸ ಕೆ. ಪ್ರಾರ್ಥಿಸಿದರು. ವಿದ್ಯಾರ್ಥಿನಿ ಪ್ರೀತಿಕಾ ಕಾರ್ಯಕ್ರಮ ನಿರೂಪಿಸಿದರು. ಸಂಸ್ಕøತ ಸಂಘದ ಅಧ್ಯಕ್ಷ ಮತ್ತು ಉಪನ್ಯಾಸಕ ವಾಸುದೇವ ಕಾರಂತ ಪಿ. ಸ್ವಾಗತಿಸಿ, ಸಂಸ್ಕøತ ಸಂಘದ ಕಾರ್ಯದರ್ಶಿ ಗುರುಕುಮಾರ್ ವಂದಿಸಿದರು.

By suddi9

Leave a Reply

Your email address will not be published. Required fields are marked *