ಬಂಟ್ವಾಳ: ನೀವು ಜನಿಸಿದ ಜಾಗದ ಒಡೆತನ ನಿಮಗೆ ಸಿಗಲಿಲ್ಲ. ಈ ಉದ್ದೇಶದಿಂದ ಕಾನೂನು ಬದಲಾವಣೆ ಮಾಡಿ, 94ಸಿ , 94 ಸಿಸಿ ಯೋಜನೆಯಡಿ ಹಕ್ಕುಪತ್ರ ವಿತರಣೆ ಮಾಡಲಾಗಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಹೇಳಿದರು.

ಮುಡಿಪು ಸರಕಾರಿ ಪದವಿ ಪೂರ್ವ ಕಾಲೇಜ್ ಮೈದಾನದಲ್ಲಿ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಹೋಬಳಿಯ ಆಯ್ದ ಗ್ರಾಮಗಳ1000ಕ್ಕೂ ಅಧಿಕ ಅರ್ಹ ಕುಟುಂಬ ಗಳಿಗೆ 94ಅ, 94ಅಅ ಹಕ್ಕುಪತ್ರ ವಿತರಿಸಿ ಮಾತನಾಡಿದರು. 94ಸಿ , 94ಸಿಸಿ ಯೋಜನೆಯಡಿ ಇದುವರೆಗೂ ಅರ್ಜಿ ಸಲ್ಲಿಸದವರ ವಿವರ ಪಡೆದು, ಅರ್ಜಿ ನೋಂದಣಿ ಮಾಡುವ ಬಗ್ಗೆ ಪ್ರಯತ್ನ ಮಾಡಲಾಗುವುದು ಎಂದವರು ತಿಳಿಸಿದರು.
ಇಲಾಖೆಗೆ ಸಚಿವರ ಶ್ಲಾಘನೆ:
ಪಾಣೆಮಂಗಳೂರು ಹೋಬಳಿಯ ವ್ಯಾಪ್ತಿಯ 9 ಗ್ರಾಮಗಳ 1000ಕ್ಕೂ ಅಧಿಕ ಅರ್ಹ ಬಡ ಫಲಾನುಭವಿಗಳಿಗೆ ಮನೆಯಡಿ ಸ್ಥಳ ಹಕ್ಕುಪತ್ರವನ್ನು ತಯಾರಿಸುವಲ್ಲಿ ವಿಶೇಷ ಕಾಳಜಿ ವಹಿಸಿದ ಬಂಟ್ವಾಳ ತಹಶೀಲ್ದಾರ್ ಮತ್ತವರ ಸಿಬ್ಬಂದಿ ವರ್ಗದ ಕಾರ್ಯ ದಕ್ಷತೆಯನ್ನು ಸಚಿವ ಖಾದರ್ ಅವರು ಶ್ಲಾಘಿಸಿದರು.
ತಹಶೀಲ್ದಾರ್- ಅಧಿಕಾರಿಗಳಿಗೆ ಸನ್ಮಾನ:
ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ಗ್ರಾಮಲೆಕ್ಕಾ ಧಿಕಾರಿ ಎ.ಪಿ.ಭಟ್, ತೌಫೀಕ್, ರಾಜಶೇಖರ, ಮಮತಾ ಅವರನ್ನು ವೇದಿಕೆಯಲ್ಲಿ ಸಚಿವರು ಸನ್ಮಾನಿಸಲಾಯಿತು.

