ಬಂಟ್ವಾಳ : ಇಲ್ಲಿನ ಸ್ನೇಹಾಂಜಲಿ ಸೇವಾ ಸಂಘ ಅಜ್ಜಿಬೆಟ್ಟು ಇದರ ರಜತ ಸಂಭ್ರಮದ ಸಂಧರ್ಭದಲ್ಲಿ ಸ್ಥಳೀಯ ಪ್ರತಿಭೆಗಳಾದ ಸ್ಮರಣ್ ಬಿ.ಎಲ್., ಲೆಸ್ವಿನ್ ಪಿಂಟೋ, ಯಶಸ್ ಕುಮಾರ್, ಪ್ರಥಮ್, ಶ್ರೀನಿಧಿ, ಚೈತ್ರಾ, ವೈಶಾಲಿ ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪ್ರಗತಿಪರ ಕೃಷಿಕ ರಾಜೇಶ್ ನಾಯಕ್ ಉಳಿಪಾಡಿಗುತ್ತು, ಗೌರವಾಧ್ಯಕ್ಷ ಪ್ರಮೋದ್ ಕುಮಾರ್, ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಸಂಘದ ಅಧ್ಯಕ್ಷ ನಾಗೇಶ್ ಎಂ. ಉಪಸ್ಥಿತರಿದ್ದರು.