ಸಾಹಿತ್ಯದ ಮೂಲ ಗುಣವೇ ಬದುಕನ್ನು ಅರಳಿಸುವಂತದ್ದು. ಒಳ್ಳೆಯ ಸಂಸ್ಕಾರ ಸಂಸ್ಕøತಿಯನ್ನು ಕಲಿಸುವ ಶಿಕ್ಷಣವು ಸಾಹಿತ್ಯದಿಂದ ದೊರೆಯುತ್ತದೆ.ಉತ್ತಮ ಸಾಹಿತ್ಯ ಕೃತಿಗಳಿಗೆ ಬದುಕನ್ನು ಉಜ್ವಲಗೊಳಿಸುವ ಶಕ್ತಿ ಇದೆ. . ಕತೆ ಕವನಗಳ ಮೂಲಕ ವಿದ್ಯಾರ್ಥಿಗಳು ತಮ್ಮೊಳಗಿನ ಸುಪ್ತ ಪ್ರತಿಭೆಯನ್ನು ಪ್ರಕಟಪಡಿಸುವುದಕ್ಕೆ ಸಾಧ್ಯ. ಸಾಹಿತ್ಯದ ಅಧ್ಯಯನದಿಂದ ಆರೋಗ್ಯವಂತ ಮನುಷ್ಯನ ನಿರ್ಮಾಣ ಸಾಧ್ಯ. ವಿದ್ಯಾರ್ಥಿಗಳು ಸಾಹಿತ್ಯ ಕಲೆಗಳ ಕುರಿತು ಆಸಕ್ತಿಯನ್ನು ತಾಳುವ ಅಗತ್ಯತೆ ಇದೆ ಎಂದು ಶ್ರೀ ವೆಂಕಟರಮಣ ಸ್ವಾಮೀ ಪ.ಪೂ ಕಾಲೇಜಿನ ಪ್ರಾಂಶುಪಾಲೆ ಶಶಿಕಲಾ ಕೆ., ಅಭಿಪ್ರಾಯಪಟ್ಟರು.

nss photo 2
ಅವರು ಬಂಟ್ವಾಳ ಎಸ್.ವಿ.ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಅಖಿಲ ಭಾರತ ಸಾಹಿತ್ಯ ಪರಿಷತ್ತು ಬಂಟ್ವಾಳ ಮತ್ತು ರಾಷ್ಟ್ರೀಯ ಸೇವಾಯೋಜನೆ ಸಹಯೋಗದಲ್ಲಿ ನಡೆದ ‘ಸಾಹಿತ್ಯ ಕಾರ್ಯಾಗಾರ’ವನ್ನು ಉದ್ಘಾಟಿಸಿ ಮಾತನಾಡಿದರು. ಮಾನವನ ಬದುಕು ಹಲವು ಬಗೆಯ ಒತ್ತಡಗಳಿಂದ ಕೂಡಿದೆ. ಮಾನಸಿಕ ನೆಮ್ಮದಿಗೆ ಒತ್ತಡ ರಹಿತ ವಾತಾವರಣ ನಿರ್ಮಾಣವಾಗಬೇಕು. ಮಾನಸಿಕ ನೆಮ್ಮದಿ ಮತ್ತು ಆನಂದವನ್ನು ಸಾಹಿತ್ಯದ ಓದು ತಂದುಕೊಡುತ್ತದೆ. ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಯ ಜೊತೆಗೆ ಸಾಹಿತ್ಯ ಕೃತಿಗಳ ಅಧ್ಯಯನವನ್ನು ನಡೆಸುವುದು ಅಗತ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಯಾನಚಿದ ಪೆರಾಜೆ ವಹಿಸಿದ್ದರು. ಸಾಹಿತ್ಯದ ಬರವಣಿಗೆ ಮತ್ತು ಓದು ವಿದ್ಯಾರ್ಥಿಗಳನ್ನು ಎತ್ತರದ ಸ್ಥಾನಕ್ಕೆ ಕೊಂಡೊಯ್ಯುತ್ತದೆ ಎಚಿದರು. ಸಂಪನ್ಮೂಲ ವ್ಯಕ್ತಿಯಾಗಿ ಪಾಣೆಮಂಗಳೂರು ಶಾರದಾ ಹೈಸ್ಕೂಲಿನ ಅಧ್ಯಾಪಕಿ ಸುಧಾನಾಗೇಶ್ ಭಾಗವಹಿಸಿದ್ದರು.

nss photo 1
ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ಸಂಚಾಲಕ ರಾಜಾರಾಮ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಾಹಿತ್ಯ ಕಾರ್ಯಾಗಾರದ ಸಂಯೋಜಕ ಚೇತನ್ ಮುಂಡಾಜೆ ಸ್ವಾಗತಿಸಿದರು.ವಿದ್ಯಾರ್ಥಿನಿ ಕು.ಮೋಕ್ಷಿತಾ ಪ್ರಾರ್ಥಿಸಿದರು. ಉಪನ್ಯಾಸಕ ಶಿವಪ್ರಸಾದ್ ನೀರಚಿಲುಮೆ ಧನ್ಯವಾದ ಸಲ್ಲಿಸಿದರು. ಎನ್ನೆಸ್ಸೆಸ್ ಸ್ವಯಂಸೇವಕಿ ಕು.ಲಿಖಿತಾ ಜಿ.ಎನ್ ಕಾರ್ಯಕ್ರಮ ನಿರೂಪಿಸಿದರು.
ರಾಷ್ಟ್ರೀಯ ಸೇವಾಯೋಜನೆಯ ಸಹ ಯೋಜನಾಧಿಕಾರಿಗಳಾದ ಪ್ರದೀಪ್ ಪ್ರಜಾರಿ, ಕವಿತಾ ಯಾದವ್, ಪ್ರವೀಣ ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *