ವಾಮದಪದವು : ಬಂಟ್ವಾಳ ತಾ| ಚೆನ್ನೈತ್ತೋಡಿ ಗ್ರಾ. ಪಂ. ವ್ಯಾಪ್ತಿಯ ಅಜ್ಜಿಬೆಟ್ಟು ಗ್ರಾಮದ ನೀಲಿ ಶ್ರೀ ವಿಷ್ಣುಮೂರ್ತಿ ಕೊಡಮಣಿತ್ತಾಯ ದೈವಸ್ಥಾನ, ಬ್ರಹ್ಮಬೈದರ್ಕಳ ಗರಡಿಯನ್ನು ಜೀರ್ಣೋದ್ಧಾರಗೊಳಿಸಿ ಪುನರ್ ನಿರ್ಮಾಣಗೊಳಿಸುವ ಸಿದ್ಧತೆಯಲ್ಲಿದ್ದು , ಸೆ. 23ರಂದು ಬಾಲಾಲಯ ಪ್ರತಿಷ್ಠೆ ನಡೆಯಲಿದೆ.

2209pkt1
ಪರಿಸರದ ದೇವಸ್ಥಾನಗಳ ಕೇಂದ್ರಸ್ಥಾನದಲ್ಲಿರುವ ಈ ದೈವಸ್ಥಾನ ನಿಸರ್ಗ ರಮಣೀಯ ಪ್ರದೇಶದಲ್ಲಿದ್ದು ಹಲವು ಶತಮಾನಗಳ ಇತಿಹಾಸ ಹೊಂದಿದೆ. ಸತ್ಯ ಪ್ರಮಾಣ ನಡೆಯುವಂತಹ ಸಾನ್ನಧ್ಯವಾಗಿದ್ದು, ಸತ್ಯ ಅಸತ್ಯಗಳ ತೀರ್ಮಾನಗಳು ಕ್ಷಣಾರ್ಧದಲ್ಲಿಯೇ ತಿಳಿಯುತ್ತಿದ್ದ ಕ್ಷೇತ್ರವೆಂದು ಜನಜನಿತವಾಗಿದೆ. ಈ ಕ್ಷೇತ್ರದ ಗಂಧ ಪ್ರಸಾದವನ್ನು ಸ್ವೀಕರಿಸಿದರೆ ಚರ್ಮರೋಗ, ವಿಷಭಯ,ಮತ್ತು ಸರ್ಪ ಭಯಗಳು ಪರಿಹಾರವಾಗುವುದೆಂದು ಜನರ ನಂಬಿಕೆಯಾಗಿದೆ. ಅನಾದಿ ಕಾಲದಿಂದಲೂ ಇಲ್ಲಿ ಜಾತ್ರೆ, ಉತ್ಸವಾದಿಗಳು ಕಾಲಕಾಲಕ್ಕೆ ನಡೆಯುತ್ತಿದ್ದು, ಊರ,ಪರವೂರ ಭಕ್ತ ಜನರ ಸಹಕಾರದೊಂದಿಗೆ ಪಾರಂಪರಿಕ ಸಂಪ್ರದಾಯದಂತೆ ನಡೆಯುತ್ತಿದೆ.

ಪ್ರಸ್ತುತ ಈ ದೇವಸ್ಥಾನವನ್ನು ನವೀಕರಣಗೊಳಿಸಿ ಪುನರ್ ನಿರ್ಮಾಣ ಮಾಡಬೇಕೆಂದು ಭಕ್ತಜನರು ಸಂಕಲ್ಪಿಸಿದಂತೆ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಂತಹ ಪರಿಹಾರ ಕಾರ್ಯಗಳು ಹಾಗೂ ಪುನರ್ ನಿರ್ಮಾಣ ಕಾರ್ಯಗಳು ನಡೆಯಬೇಕಾಗಿದೆ. ಜೀರ್ಣೋದ್ಧಾರಕ್ಕೆ ಸುಮಾರು 30 ಲಕ್ಷ ರೂ. ವೆಚ್ಚದ ಅಂದಾಜು ಪಟ್ಟಿ ತಯಾರಿಸಲಾಗಿದೆ. ದೈವಸ್ಥಾನದ ಚಾವಡಿ, ಧ್ವಜಸ್ಥಂಭ, ದಂಬೆಕಲ್ಲು, ಪರಿಧಿಗಳ ನಿರ್ಮಾಣವಾಗಬೇಕಾಗಿದೆ.

ಇದಕ್ಕಾಗಿ ಬಾಬು ರಾಜೇಂದ್ರ ಶೆಟ್ಟಿ ಅಧ್ಯಕ್ಷರಾಗಿರುವ ವ್ಯವಸ್ಥಾಪನ ಸಮಿತಿ ಹಾಗೂ ಸದಸ್ಯರು ಮತ್ತು ಉದ್ಯಮಿ ಶ್ರೀನಿವಾಸ ನಾಯಕ್ ಅವರ ಗೌರವಾಧ್ಯಕ್ಷತೆಯಲ್ಲಿ , ನವೀನಚಂದ್ರ ಶೆಟ್ಟಿ ಅಧ್ಯಕ್ಷರಾಗಿ , ಪ್ರವೀಣ್ ಗಟ್ಟಿ ಕಾರ್ಯದರ್ಶಿಯಾಗಿರುವ ಜೀರ್ಣೋದ್ಧಾರ ಸಮಿತಿ ಮತ್ತಿತರ ಪದಾಧಿಕಾರಿ,ಸದಸ್ಯರೊಂದಿಗೆ ಕಾರ್ಯ ಪ್ರವೃತ್ತವಾಗಿದೆ.

By suddi9

Leave a Reply

Your email address will not be published. Required fields are marked *