ವಿಟ್ಲ:ಪಿಂಗಾರ ತೋಟಗಾರಿಕಾ ರೈತ ಉತ್ಪಾದಕ   ಇದರ ವಾರ್ಷಿಕ ಮಹಾಸಭೆಯು ಮಂಗಳಾ ಮಂಟಪದಲ್ಲಿ ನಡೆಯಿತು. ಕಂಪೆನಿ ಅಧ್ಯಕ್ಷ ರಾಮಕಿಶೋರ್ ಕೆ ಸಭಾಧ್ಯಕ್ಷತೆ ವಹಿಸಿ ಕಂಪೆನಿಯಿಂದ ರೈತರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಮಂಗಳೂರಿನ ತೋಟಗಾರಿಕಾ ಇಲಾಖೆಯ ಸಹಾಕ ನಿರ್ದೇಶಕ ಪ್ರವೀಣ್, ಒಕ್ಕೆತ್ತೂರು ಸೀತಾರಾಮ ಶೆಟ್ಟಿ, ಪುರುಷೋತ್ತಮ ಭಟ್ ಬದನಾಜೆ, ವಿಷ್ಣು ಭಟ್ ಕೋಡಪದವು, ಬಾಲವಂದ್ರ ಕೇಪು, ಶ್ರೀನಿವಾಸ ಆಚಾರ್ ಮಂಚಿ, ನಿಶ್ವಲ್ ಜೆ ಶೆಟ್ಟಿ, ಮೇಘಶ್ಯಾಂ, ಚಂದ್ರಶೇಖರ ಭಾಗವಹಿಸಿದ್ದರು. ಕಂಪೆನಿಯ ಉಪಾಧ್ಯಕ್ಷ ಮನೋಜ್ ಪ್ರಸಾದ್ ಶೆಟ್ಟಿ, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ದಿನೇಶ್, ಬಾಲಕೃಷ್ಣ ಇತರ ನಿರ್ದೇಶಕರು ಉಪಸ್ಥಿತರಿದ್ದರು.

1

ನಿರ್ದೇಶಕ ಶ್ರೀನಿವಾಸ ಭಟ್ ಸ್ವಾಗತಿಸಿದರು. ವೆಂಕಟಕೃಷ್ಣ ಲೆಕ್ಕಪತ್ರ ಮಂಡಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರದೀಪ ಎಸ್ ವರದಿ ವಾಚಿಸಿದರು. ನಿರ್ದೇಶಕ ಲಕ್ಷ್ಮೀನಾರಾಯಣ ಅಡ್ಯಂತಾಯ ವಂದಿಸಿದರು. ಈ ಸಂದರ್ಭದಲ್ಲಿ ಕಂಪೆನಿಯ ಯಂತ್ರೋಪಕರಣಗಳಿಗೆ ಅತೀ ಹೆಚ್ಚು ಕೆಲಸ ನೀಡಿದ ಇರಾ ಗ್ರಾಮದ ನಿಶ್ಚಲ್ ರವರನ್ನು ಗೌರವಿಸಲಾಯಿತು

By suddi9

Leave a Reply

Your email address will not be published. Required fields are marked *