ಬಂಟ್ವಾಳ: ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘ ಇದರ 13 ನೇ ವರ್ಷದ ವಾರ್ಷಿಕೋತ್ಸವವು ವಿಟ್ಲ ಮಾದರಿ ಶಾಲಾ ಸಭಾ ಭವನದಲ್ಲಿ ಅ.29 ರಂದು ಭಾನುವಾರ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ನಡೆಯುವ ಶ್ರೀ ಸತ್ಯನಾರಾಯಣ ಪೂಜೆಯ ಬಳಿಕ ಸಂಘದ ಅಧ್ಯಕ್ಷ ರಮೇಶ್ ಕಡಂಬು ರವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿರುವುದು.

ಕನ್ಯಾನ ಬಾಲೆಕೋಡಿ ಶ್ರೀ ಕಾಶಿ ಕಾಳಬೈರವೇಶ್ವರ ಶಿಲಾಂಜನ ಕ್ಷೇತ್ರದ ಶ್ರೀ ಶ್ರೀ ಶಶಿಕಾಂತಮಣಿ ಸ್ವಾಮೀಜಿ ಆಶೀರ್ವಚನ ನೀಡುವರು. ಮುಖ್ಯ ಅತಿಥಿಗಳಾಗಿ ಮಂಗಳೂರು ರೈ ಎಸ್ಠಟಿನ ಅಶೋಕ್ ಕುಮಾರ್ ರೈ ಕೆ ಎಸ್, ಜಿಲ್ಲಾ ಪಾಣಾರ ಯಾನೆ ನಲಿಕೆಯವರ ಸಂಘದ ಕೋಶಾಧಿಕಾರಿ ಎನ್ ಕೃಷ್ಣ ಸೋಮೇಶ್ವರ, ಮಹಿಳಾ ವೇದಿಕೆ ಅಧ್ಯಕ್ಷೆ ಚಿನ್ನಮ್ಮ ಟೀಚರ್, ಜಿಲ್ಲಾ ಯುವ ವೇದಿಕೆ ಅಧ್ಯಕ್ಷ ಸುಬ್ರಾಯ ಕಲ್ಮಂಜ, ಮತ್ತು ಬಂಟ್ವಾಳ ತಾಲೂಕು ಯುವ ವೇದಿಕೆ ಅಧ್ಯಕ್ಷ ರಮೇಶ್ ಕುದ್ರೆಬೆಟ್ಟು ಇವರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ನಾಟಿ ವೈದ್ಯ ಸೋಮನಾಥ ಪಂಡಿತ ಅನಂತಾಡಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ದೈವನರ್ತಕ ಲೋಕಯ್ಯ ಸೇರಾ, ದೈವ ನರ್ತಕ ವೆಂಕಪ್ಪ ಪಾಣಾಜೆಕೋಡಿ ಮತ್ತು ಯಕ್ಷಗಾನ ಭಾಗವತ ಶಿವಪ್ಪ ಕೊಕ್ಕಪುಣಿ ಇವರನ್ನು ಸನ್ಮಾನಿಸ ಲಾಗುವುದು. ಸಭೆಯ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರತಿಭಾ ಪ್ರದರ್ಶನ ನಡೆಯಲಿದೆ.

By suddi9

Leave a Reply

Your email address will not be published. Required fields are marked *