ಬಂಟ್ವಾಳ:ದೇಶದಲ್ಲಿ ಆಡಳಿತಾರೂಢ ಸರ್ಕಾರವು ಜನವಿರೋಧಿ ಮತ್ತು ಐಕ್ಯತೆಗೆ ವಿರುದ್ಧವಾಗಿ ವರ್ತಿಸುವುದರ ಜೊತೆಗೆ ಬೆಲೆಯೇರಿಕೆ ಮತ್ತು ನಿರುದ್ಯೋಗ ಸಮಸ್ಯೆ ನಿವಾರಿಸುವಲ್ಲಿ ವಿಫಲವಾಗಿದೆ ಎಂದು ಎಐಟಿಯುಸಿ ಮುಖಂಡ ರಾಮಣ್ಣ ವಿಟ್ಲ ಆರೋಪಿಸಿದ್ದಾರೆ.

31btl-Meravnige
ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಬಳಿ ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ಸೋಮವಾರ ರಾತ್ರಿ ಏರ್ಪಡಿಸಿದ್ದ ಪಂಜಿನ ಮೆರವಣಿಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಿಪಿಐ ಮುಖಂಡ ಬಿ.ಶೇಖರ್, ಎಚ್‍ಎಂಎಸ್ ಸಂಘಟನೆ ಮುಖಂಡ ಇಬ್ರಾಹಿಂ ಗೋಳಿಕಟ್ಟೆ, ಸಾಮಾಜಿಕ ನ್ಯಾಯಪ ಹೋರಾಟ ಸಮಿತಿ ಮುಖಂಡ ಪ್ರಭಾಕರ ದೈವಗುಡ್ಡೆ ಮತ್ತಿತರರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ರೈತರ ಆತ್ಮಹತ್ಯೆ ಮತ್ತು ಕೃಷಿಭೂಮಿ ಮುಳುಗಡೆ ಭೀತಿ ಎದುರಿಸುತ್ತಿರುವ ಸಂತ್ರಸ್ತರ ಬಗ್ಗೆ ಸರ್ಕಾರಗಳು ತೀರಾ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಪುರಸಭಾ ಸದಸ್ಯ ಬಿ.ಮೋಹನ್, ಜೆಡಿಎಸ್ ಮುಖಂಡ ಹಾರೂನ್ ರಶೀದ್, ಪ್ರಮುಖರಾದ ಸಂಜೀವ ಬಂಗೇರ, ಸುರೇಶ ಕುಮಾರ್, ಉದಯ ಕುಮಾರ್, ಕೆ.ಈಶ್ವರ, ರಾಜಾ ಚೆಂಡ್ತಿಮಾರ್ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *