ಬೆಂಗಳೂರು: ಅಂಬೇಡ್ಕರ್, ಬಸವಣ್ಣ ತತ್ವಗಳ ಸ್ಮರಿಸಿ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ 2 ಲಕ್ಷದ 9 ಸಾವಿರದ 181 ಕೋಟಿ ರೂ. ಬಜೆಟ್ ಮಂಡನೆ ಪ್ರಾರಂಭಿಸಿದರು.
ಬಳಿಕ ಮಾತು ಪ್ರಾರಂಭಿಸಿದ ಅವರು, ರಾಜಕೀಯ ಕ್ಷೇತ್ರ ನನ್ನ ಅನುಭವ ಮಂಟಪ ಎಂದಿದ್ದಾರೆ. ತಮ್ಮ ಅಧಿಕಾರವಧಿಯಲ್ಲಿ ರಾಜ್ಯದ ಆಂತರಿಕ ಉತ್ಪನ್ನ ಶೇ. 8.5ರಷ್ಟು ಬೆಳವಣಿಗೆ ಹೊಂದಿದೆ ಎಂದರು.
ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ – 60 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲ
ಸಂಧ್ಯಾ ಸುರಕ್ಷಾ, ಮನಸ್ವಿನಿ ಪಿಂಚಣಿ ಹಣ 500 ರೂನಿಂದ 600 ರೂಗೆ ಏರಿಕೆ
70 ಲಕ್ಷ ರೈತರಿಗೆ ರೈತ ಬೆಳಕು ಯೋಜನೆಯಿಂದ ಅನುಕೂಲ
ರೈತರಿಗೆ ನೇರ ಆದಾಯ ಒದಗಿಸುವ ರೈತಬೆಳಕು ಯೋಜನೆ
ಚಿಕ್ಕಮಗಳೂರಲ್ಲಿ ಕುವೆಂಪು ವಿವಿ ಸ್ನಾತಕೋತ್ತರ ಕೇಂದ್ರ
ಜಿಕೆವಿಕೆಯಲ್ಲಿ ನಂಜುಂಡ ಸ್ವಾಮಿ ಸಂಶೋಧನಾ ಕೇಂದ್ರ
ಮುದ್ದೇಬಿಹಾಳದಲ್ಲಿ ನೂತನ ಕೃಷಿ ಸಂಶೋಧನಾ ಪೀಠ
ಮೈಸೂರು ವಿವಿಯಲ್ಲಿ ಬಸವ ಅಧ್ಯಯನ ಕೇಂದ್ರ- 2 ಸಾವಿರ ಕೋಟಿ ಅನುದಾನ
ಚಾಮರಾಜ ನಗರದಲ್ಲಿ ನೂತನ ಕೃಷಿ ಕಾಲೇಜು ಸ್ಥಾಪನೆ
ಕಬ್ಬು ಕಟವು ಯಂತ್ರಗಳಿಗೆ 20 ಕೋಟಿ ರೂ. ಸಹಾಯಧನ
ಶೇಂಗಾ ಬೆಳಗಾರರಿಗೆ 50 ಕೋಟಿ ವಿಶೇಷ ಪ್ಯಾಕೇಜ್
ನಿಧನರಾದ ರೈತರ 1 ಲಕ್ಷದವರೆಗೆ ಸಾಲಮನ್ನಾ
ರೈತರಿಗೆ ಶೇ. 3ರ ಬಡ್ಡಿದರದಲ್ಲಿ 10 ಲಕ್ಷದವರೆಗೆ ಸಾಲ
ರೇಷ್ಮೆ ಇಲಾಖೆಗೆ 429 ಕೋಟಿ ಅನುದಾನ
ತೋಟಗಾರಿಕೆ ಕ್ಷೇತ್ರಕ್ಕೆ 1091 ಕೋಟಿ ಅನುದಾನ
ಸಹಕಾರ ಕ್ಷೇತ್ರಕ್ಕೆ 1663 ಕೋಟಿ ಅನುದಾನ
ಸಣ್ಣ ನೀರಾವರಿಗೆ 2090 ಕೊಟಿ ಅನುದಾನ
ಮೀನುಗಾರಿಕೆ 337 ಕೋಟಿ ಅನುದಾನ
ಕೃಷಿಗೆ 5080 ಕೋಟಿ ಅನುದಾನ
ಜಲಸಂಪನ್ಮೂಲ ಇಲಾಖೆಗೆ 15,929 ಕೊಟಿ ಅನುದಾನ
ಪಶುಸಂಗೋಪನೆ ಇಲಾಖೆಗೆ 2245 ಕೋಟಿ ಅನುದಾನ
