ಬಂಟ್ವಾಳ: ರಾಜ್ಯ ಅಸಂಘಟಿತ ಕಾರ್ಮಿಕ ಸಾಮಾಜಿಕ ಭದ್ರತಾ ಮಂಡಳಿ, ಕಾರ್ಮಿಕ ನಿರೀಕ್ಷಕರ ಕಚೇರಿ,  ಪೋಲೀಸ್ ಇಲಾಖೆ, ಬಂಟ್ವಾಳ, ಭಾರತೀಯ ರೆಡ್‍ಕ್ರಾಸ್‍ಸಂಸ್ಥೆ,  ಹಾಗೂ ರೋಟರಿಕ್ಲಬ್‍ ಸಂಯುಕ್ತಾಶ್ರಯದಲ್ಲಿ ಚಾಲಕರಿಗೆ ವಿಪತ್ತು ನಿರ್ವಹಣೆಗಳ ಬಗ್ಗೆ ತರಬೇತಿ ಕಾರ್ಯಗಾರ  ಇಲ್ಲಿನ ಬಿ.ಸಿ.ರೋಡ್ ಅನಂತ ಸೋಮಾಯಾಜಿ ಮೆಮೋರಿಯಲ್‍ರೋಟರಿ ಹಾಲ್‍ನಲ್ಲಿ ಇತ್ತೀಚೆಗೆ ನಡೆಯಿತು.

ಈ ವೇಳೆ  ಚಾಲಕರಿಗೆ ಪ್ರಥಮ ಚಿಕಿತ್ಸೆ ಮತ್ತು ಅಪಘಾತ ಸಂಭವಿಸಿದಾಗ ತೆಗೆದುಕೊಳ್ಳಬೇಕಾದ ಕಾನೂನು ಕ್ರಮ, ವಿಪತ್ತು ನಿರ್ವಹಣೆಗಳ ಬಗ್ಗೆ ತರಬೇತಿ ಕಾರ್ಯಗಾರದ ಬಗ್ಗೆ ಇಂಡಿಯನ್‍ರೆಡ್‍ಕ್ರಾಸ್ ಸೊಸೈಟಿಯ ವಿಪತ್ತು ನಿರ್ವಹಣೆ ಮತ್ತು ಪ್ರಥಮಚಿಕಿತ್ಸೆರಾಷ್ಟ್ರೀಯ ತರಬೇತಿದಾರ ಡಾ. ರಾಮಚಂದ್ರ ಭಟ್, ರಾಜಶೇಖ ರೆಡ್ಡಿ ವಿವರಿಸಿದರು.

ಕಾರ್ಯಕ್ರಮದಲ್ಲಿ  ಅಧ್ಯಕ್ಷತೆಯನ್ನು ಇಂಡಿಯನ್‍ರೆಡ್‍ಕ್ರಾಸ್ ಸೊಸೈಟಿಚೇರ್‍ಮೆನ್‍ ಆಸ್ಕರ್‍ ಆನಂದ , ರೋಟರಿ ಕ್ಲಬ್ ಬಂಟ್ವಾಳ ಅಧ್ಯಕ್ಷ  ಸಂಜೀವ ಪೂಜಾರಿ ವಹಿಸಿದ್ದರು.

ಬಂಟ್ವಾಳ ರೋಟರಿಕ್ಲಬ್‍ನಕೋಶಾಧಿಕಾರಿ ಪ್ರಕಾಶ್‍ ಬಾಳಿಗ, ಓಬಯ್ಯ,   ರೋಟರಿಕ್ಲಬ್‍ನ ಮಾಜಿ ಅಧ್ಯಕ್ಷ ವಸಂತ ಪ್ರಭು, ರಿಕ್ಷಾಡ್ರೈವರ್‍ಅಸೋಸೊಯೇಷನ್ ಕಾರ್ಯದರ್ಶಿ ಚಂದ್ರಶೇಖರ್, ಆಟೋಚಾಲಕರ ಸಂಘದ ಅಧ್ಯಕ್ಷ ವಸಂತಕುಮಾರ್, ಕಾರ್ಯದರ್ಶಿ ನಾರಾಯಣ ಪೂಜಾರಿ, ಚಂದ್ರಶೇಖರ್‍ಕುಲಾಲ್ ಪಣೋಲಿಬೈಲ್, ಜಗದೀಶ ಕೆ, ಸಜೀಪ ಮೂನ್ನೂರು, ಕರುಣಾಕರ ನರಿಕೊಂಬು., ಎಂ.ಎಂ ಜಾಕ್ರೀಯ ಮಡಿಕೇರಿ ಮತ್ತಿತರರು ಪಾಲ್ಗೊಂಡಿದ್ದರು.

ಕಾರ್ಮಿಕ ನಿರೀಕ್ಷಕಿ ಮೆರ್ಲಿನ್ ಗ್ರೇಸಿ ಡಿಸೋಜ ಬಂಟ್ವಾಳ  ಸ್ವಾಗತಿಸಿದರು, ವಂದಿಸಿದರು. ಶಶಿಧರ ಕಾರ್ಯಕ್ರಮ ನಿರ್ವಹಿಸಿದರು, ಸ್ವಸ್ತಿಕ ಸಹಕರಿಸಿದರು.

 

 

 

 

 

By suddi9

Leave a Reply

Your email address will not be published. Required fields are marked *