ಮಂಗಳೂರು: ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ಕೊನೆಗೂ ರಾಷ್ಟ್ರಪತಿ ಅಂಕಿತ ಸಿಕ್ಕಿದ್ದು, ತಿದ್ದುಪಡಿ ಮಾಡಿ ರಾಜ್ಯ ಸರ್ಕಾರ ಕಳಿಸಿದ್ದ ಮಸೂದೆಗೆ ಏಳು ತಿಂಗಳ ಬಳಿಕ ರಾಷ್ಟ್ರಪತಿಗಳಿಂದ ಅಂಕಿತ ಹಾಕಿದ್ದಾರೆ.
ಕಂಬಳ ನಿಷೇಧಿಸಬೇಕು ಎಂದು ಪೇಟಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು. ವಿಧೇಯಕ ತಿದ್ದುಪಡಿ ಆದ 7 ತಿಂಗಳ ಬಳಿಕ ರಾಷ್ಟ್ರಪತಿಗಳು ಇಂದು ವಿದೇಯಕಕ್ಕೆ ಅಂಕಿತ ಹಾಕಿದ್ದಾರೆ.
ಈ ಮೊದಲು ಪೇಟಾ ದೂರಿನ ಹಿನ್ನೆಲೆಯಲ್ಲಿ ಕಂಬಳಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಂಬಳ ವಿಧೇಯಕ ತಿದ್ದುಪಡಿ ಮಸೂದೆ ಮಂಡಿಸಿತ್ತು.
