ಧಾರವಾಡ: ಕ್ರಿಮಿನಲ್ ಗಳಿಗೆ ರಾಜಾಶ್ರಯ ನೀಡಿರುವ ಸರ್ಕಾರ ಇದ್ದರೆ ಅದು ಸಿದ್ದರಾಮಯ್ಯ ಸರ್ಕಾರ ಎಂದು ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಶಿವಾಜಿ ಪುತ್ತಳಿಗೆ ಮಾಲಾರ್ಪಣೆ ಮಾಡಿ ಬಳಿಕ ಮಾತನಾಡಿದ ಅವರು, ಈ ಹಿಂದೆ ಶಾಸಕ ಕಾಶಪ್ಪನವರ ಹಲ್ಲೆ ಪ್ರಕರಣ, ಸಚಿವ ಕೆ.ಜೆ.ಜಾರ್ಜ್ ಪುತ್ರನ ಹಲ್ಲೆ ಪ್ರಕರಣ ಹಾಗೂ ಸಚಿವ ವಿನಯ ಕುಲಕರ್ಣಿ ವೈದ್ಯರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಇದೇ ರೀತಿ ಮುಂದುವರೆದರೆ ಕ್ರಿಮಿನಲ್ ಗಳಿಗೆ ರಾಜಾಶ್ರಯ ಸಿಕ್ಕಂತಾಗುತ್ತದೆ ಎಂದು ಕಿಡಿಕಾರಿದರು.
