20180216_121852

ಬಾಳ್ತಿಲ: ಬಾಳ್ತಿಲ ಗ್ರಾಮ ಪಂಚಾಯತ್‍ನ2017-18ನೇ ಸಾಲಿನ 14ನೇ ಹಣಕಾಸು ಮತ್ತು ಸ್ವಂತ ನಿಧಿಯಲ್ಲಿ ಪರಿಶಿಷ್ಟ ಪಂಗಡ ಮತ್ತು ವಿಕಲಚೇತನರಿಗೆ ಮೀಸಲಿಟ್ಟ ಅನುದಾನದಲ್ಲಿ ಸುಮಾರು 2 ಲಕ್ಷ ಮೊತ್ತದ ಸವಲತ್ತು ಮತ್ತು ಚೆಕ್ ವಿತರಣಾ ಕರ್ಯಕ್ರಮ ಇಲ್ಲಿನ ಸುವರ್ಣಸೌಧ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಗ್ರಾಮಸ್ಥರು ಗಾಗೂ ಗ್ರಾಮ ಪಂಚಾಯತ್‍ ನಡುವೆ ಹೊಂದಾಣಿಕೆ  ಇದ್ದರೆ ಗ್ರಾಮದ ಅಭಿವೃದ್ಧಿ ಸಾಧ್ಯ. ಸರ್ಕಾರದ  ಯೋಜನೆಗಳು ಅರ್ಹ ಫಲಾನುಭವಿಗಳಿಗೆ ದೊರೆತಲ್ಲಿ ಸರ್ಕಾರದ ಆಶಯ ಈಡೇರುತ್ತದೆ. ಅದನ್ನು ಬಾಳ್ತಿಲ ಗ್ರಾಮ ಪಂಚಾಯತ್ ಪಾರದರ್ಶಕವಾಗಿ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಈ ವೇಳೆ ಗ್ರಾಮದ 50 ಮಂದಿಗೆ ಸೋಲಾರ್ ಲಾಟೀನ್,  5 ಮಂದಿಗೆ ವೃದ್ಯಕೀಯ ವೆಚ್ಚದ ಚೆಕ್,  2 ಮಂದಿಗೆ ಶೈಕ್ಷಣಿಕ ವೆಚ್ಚದ  ಚೆಕ್,  ತಲಾ ಒಬ್ಬರಿಗೆ ಸರಳ ವಿವಾಹ ವೆಚ್ಚ ಮತ್ತು ನೀರಿನ ಟ್ಯಾಂಕ್ ಚೆಕ್,  ಹೈನುಗಾರಿಕೆ ಪ್ರೋತ್ಸಾಹ ಧನ ಚೆಕ್ ,  ಮನೆ ದುರಸ್ತಿ ಚೆಕ್ 2 ಬಿಪಿಎಲ್ ಕುಟುಂಬಕ್ಕೆ ಶೌಚಾಲಯಕ್ಕೆ ಸಹಾಯಧನ ಶೇ.2 ಮೀಸಲಿನಿಂದ ಬಾಳ್ತಿಲ , ನೀರಪಾದೆ ಶಾಲೆಗೆ ಕ್ರೀಡಾ ಸಾಮಾಗ್ರಿಗಳ ವಿತರಣೆ ಹಾಗೂ ಗ್ರಾಮದ 29 ಆಶ್ರಯ ಯೋಜನೆಯ ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪತ್ರ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಸದಸ್ಯೆ ಲಕ್ಷ್ಮೀ ಗೋಪಾಲಾಚಾರ್ಯ, ಅಧ್ಯಕ್ಷತೆ ವಹಿಸಿದ್ದ  ಗ್ರಾ.ಪಂ. ಅಧ್ಯಕ್ಷ ವಿಠಲ್ ಮಾತನಾಡಿದರು. ಮಾಜಿ ಜಿ.ಪಂ ಸದಸ್ಯ ಆರ್. ಚೆನ್ನಪ್ಪ ಕೋಟ್ಯಾನ್, ಗ್ರಾ.ಪಂ. ಉಪಾಧ್ಯಕ್ಷೆ ಪೂರ್ಣಿಮಾ,  ಪಿಡಿಒ ಸಂದ್ಯಾ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಮೋಹನ್ ಪಿ.ಎ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *