5a0297e8-2c72-4c7f-b3f6-95c802110056

ಮಂಗಳೂರು: ಮೂರು ದಿನಗಳ ಕರಾವಳಿ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಕಾಟಿಪಳ್ಳ ಗಣೇಶಪುರದ ದೀಪಕ್ ರಾವ್ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದರು.

89947

ಈ ಸಂದರ್ಭ ಮಾಜಿ ಸಚಿವ ಕೃಷ್ಣ ಜೆ..ಪಾಲೆಮಾರ್ ವೈಯಕ್ತಿಕ 5 ಲಕ್ಷ ರೂ. ಹಾಗೂ ದ.ಕ.ಜಿಲ್ಲಾ ಬಿಜೆಪಿಯಿಂದ 5ಲಕ್ಷ ರೂ.ಯನ್ನು ಅಮಿತ್ ಶಾ ಅವರು ಕುಟುಂಬಕ್ಕೆ ಹಸ್ತಾಂತರಿಸಿ ಧೈರ್ಯ ತುಂಬಿದರು.  ಅಮಿತ್ ಶಾ ಅವರು ಕೃಷ್ಣ ಜೆ ಪಾಲೆಮಾರ್ ಅವರನ್ನು ಬೆನ್ನು ತಟ್ಟಿ ಸಂತಸ ವ್ಯಕ್ತಪಟ್ಟರು.  ಮಾಜಿ ಮುಖ್ಯಮಂತ್ರಿ ಬಿ.ಯಸ್.ಯಡಿಯೂರಪ್ಪ, ಸಂಸದ ನಳಿನ್ ಕುಮಾರ್, ಮಾಜಿ ಸಚಿವ ಕೃಷ್ಣ ಜೆ.ಪಾಲೇಮಾರ್, ಡಾ. ಭರತ್ ಶೆಟ್ಟಿ ವೈ, ಸತ್ಯಜಿತ್ ಸುರತ್ಕಲ್, ಸಂಜೀವ ಮಠಂದೂರು, ಮತ್ತಿತರ ನಾಯಕರು ಉಪಸ್ಥಿತರಿದ್ದರು.

0101010

ಸತ್ಯಜಿತ್ ಅವರು ನಡೆದ ಘಟನೆ ಕುರಿತು ಅಮಿತ್ ಶಾ ಅವರಿಗೆ ಮಾಹಿತಿ ನೀಡಿದರು. ದೀಪಕ್ ರಾವ್ ಮನೆಗೆ ಅಮಿತ್ ಶಾ ಮನೆಗೆ ಸಂಜೆ ೩ ಗಂಟೆಗೆ ನಿಗದಿಯಾಗಿತ್ತು. ಆದರೆ ಪ್ರವಾಸದ ಒತ್ತಡದಿಂದ ೫.೨೦ಕ್ಕೆ ಭೇಟಿ ನೀಡಿ ಸುಮಾರು ೧೩ ನಿಮಿಷ ಕುಟುಂಬದವರೊಂದಿಗೆ ಕಳೆದರು. ಎಸ್ ಪಿ ಜಿ, ರಾಜ್ಯದ ಕಮಾಂಡೋ ಪಡೆ, ಸ್ಥಳೀಯ ಪೊಲೀಸ್ ಪಡೆ ಬಿಗಿ ಭದ್ರತೆ ಒದಗಿಸಿತ್ತು.

By suddi9

Leave a Reply

Your email address will not be published. Required fields are marked *