ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅಭಿನಯದ ಟಗರು ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಅಭಿಮಾನಿಗಳು ಬೆಳ್ಳಂಬೆಳಗ್ಗೆ ನಗರದ ಚಿತ್ರ ಮಂದಿರಗಳ ಮುಂದೆ ಕ್ಯೂನಲ್ಲಿ ನಿಂತು ಫಸ್ಟ್ ಡೇ ಫಸ್ಟ್ ಶೋ ವೀಕ್ಷಿಸಿದ್ದಾರೆ.
ಬರೀ ಕರ್ನಾಟಕದ ಮಾತ್ರವಲ್ಲ ಯುನೈಟೆಡ್ ಅರೆಬಿಕ್ ಎಮಿರೇಟ್ಸ್(ಯುಎಇ) ನಲ್ಲಿ ಕೂಡ ಶಿವಣ್ಣ ಫ್ಯಾನ್ಸ್ ಇದ್ದು, ಅವರು ಚಿತ್ರ ನೋಡಲು ಅಲ್ಲಿಂದ ಕರ್ನಾಟಕಕ್ಕೆ ಬಂದಿಳಿದಿದ್ದಾರೆ. ಇದು ಅವರಿಗೆ ಶಿವಣ್ಣನ ಮೇಲಿರುವ ಅಭಿಮಾನ ಎಷ್ಟಿದೆ ಎಂಬುದನ್ನು ತೋರಿಸುತ್ತದೆ.
