1518934967-mohammed_haris_nalapad-300x225

ಬೆಂಗಳೂರು: ಭಾನುವಾರ ಉದ್ಯಮಿ ಲೋಕನಾಥನ್ ಅವರ ಮಗ ವಿದ್ವತ್ ಮೇಲೆ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ದಾದಾಗಿರಿ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸದ್ಯ ಆರೋಪಿ ಪರಪ್ಪನ ಅಗ್ರಹಾರದಲ್ಲಿ 14 ದಿವಸಗಳ ಕಾಲ ನ್ಯಾಯಾಂಗ ಬಂಧನದಲ್ಲಿರುವ ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಇಂದು ಸಿಟಿ ಸಿವಿಲ್ ಕೋರ್ಟ್ನ ನ್ಯಾ. ಪರಮೇಶ್ವರ ಪ್ರಸನ್ನ ಅವರಿಂದ ನಡೆಯಿತು.

ಅರ್ಜಿ ವಿಚಾರಣೆ ನಡೆಸಿದ ನ್ಯಾ. ಪರಮೇಶ್ವರ ಅವರು ವಿದ್ವತ್ ಹಾಗೂ ನಲಪಾಡ್ ಅವರ ಪರ ವಾದಿಸಿದ ವಕೀಲರ ವಾದಗಳನ್ನು ಪರಿಗಣಿಸಿ ಸೆಷನ್ ಕೋರ್ಟ್ ನಿಂದ ಫೆ.24ಕ್ಕೆ ಮುಂದೂಡಿಕೆ ಮಾಡಿದ್ದಾರೆ.

ಜಾಮೀನು ಅರ್ಜಿ ವಿಚಾರಣೆ ವೇಳೆ ವಿದ್ವತ್ ಪರ ವಾದ ಮಾಡಿದ ವಿಶೇಷ ಸರ್ಕಾರಿ ಅಭಿಯೋಜಕ ಶ್ಯಾಮ್ ಸುಂದರ್ ಪ್ರಕರಣದ ಗಂಭಿರತೆಯನ್ನು ನ್ಯಾಯಾಧೀಶರ ಮುಂದೆ ಹೇಳಿದರು.

ಇದೇ ವೇಳೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿದ್ವತ್ ಪರ ವಾದ ಮಾಡುವುದಕ್ಕೆ ನ್ಯಾಯಾಲದಲ್ಲಿ ಕೆಲ ಕಾಲ ವಿಶೇಷ ವಿಶೇಷ ಸರ್ಕಾರಿ ಅಭಿಯೋಜಕ ಶ್ಯಾಮ್ ಸುಂದರ್ ಹಾಗೂ ಈ ಹಿಂದೆ ಸರ್ಕಾರ ನೇಮಕ ಮಾಡಿದ್ದ ರಾಜಣ್ಣ ಅವರ ಮಧ್ಯೆ ಗೊಂದಲ ಉಂಟಾಯಿತು.

ವಿಶೇಷ ಸರ್ಕಾರಿ ಅಭಿಯೋಜಕ ಶ್ಯಾಮ್ ಸುಂದರ್ ಅವರು ಈ ಬಗ್ಗೆ ನಾಯಾಧೀಶರ ಗಮನಕ್ಕೆ ತಂದು ನನ್ನ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿದ್ವತ್ ಪರವಾಗಿ ವಾದ ಮಾಡುವುದಕ್ಕೆ ಸರ್ಕಾರ ನೇಮಕ ಮಾಡಿದೆ. ಇದಲ್ಲಧೆ ಈ ಬಗ್ಗೆ ಅದೇಶ ಪ್ರತಿಯನ್ನು ನ್ಯಾಯಾಲಯಕ್ಕೆ ನೀಡಿರುವೆ. ಇನ್ನು ಮುಂದೆ ವಿದ್ವತ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾನೇ ವಾದ ಮಾಡುವೆ ಅಂತ ಹೇಳಿದರು.

ಜಾಮೀನು ಅರ್ಜಿಯಲ್ಲಿ ಏನಿತ್ತು? ಸಿಎಂ ಗೆ ಸಾಮಾಜಿಕ ಜಾಲತಾಣದಲ್ಲಿ ಕೊಲೆ ಬೆದರಿಕೆ ರಾಜಕೀಯ ಮೈಲೇಜ್‍ಗಾಗಿ ಶತ್ರುಗಳ ಈ ರೀತಿ ಮಾಡಿದ್ದಾರೆ. ಚುನಾವಣಾ ಸಮಯವಾದ್ದರಿಂದ ನನ್ನನ್ನು ಸೋಲಿಸಲು ಈ ರೀತಿಯ ಕುತಂತ್ರ ಮಾಡಲಾಗಿದೆ. ಇದರಿಂದ ತಮ್ಮ ಕ್ಷೇತ್ರದ ಮತದಾರರನ್ನು ಸೆಳೆಯಲು ಪ್ರತಿಪಕ್ಷಗಳು ಹುನ್ನಾರ ಮಾಡಿವೆ. ಮಾಧ್ಯಮಗಳು ಅನಾವಶ್ಯಕವಾಗಿ ಇದನ್ನು ಹೈಪ್ ಮಾಡಿದೆ ಅಂತ ತಿಳಿಸಿದ್ದ.

ನನ್ನ ಮೇಲೆ ದೂರು ದಾಖಲಿಸಿರುವುದು ಸುಳ್ಳು ಕೇಸ್. ಆಧಾರ ರಹಿತವಾದ, ರಾಜಕೀಯ ದುರುದ್ದೇಶದಿಂದ ಕೇಸ್ ದಾಖಲಿಸಲಾಗಿದೆ. ನನ್ನ ಹಾಗೂ ತಂದೆಯ ಏಳಿಗೆ ಸಹಿಸದವರು ಆಧಾರ ರಹಿತ ಕೇಸ್ ದಾಖಲಿಸಿದ್ದಾರೆ. 10 ರಿಂದ 15 ಜನ ಹಲ್ಲೆ ಅಂತಿದೆ. ನಾನೇ ಹಲ್ಲೆ ಮಾಡಿದ್ದೇನೆ ಅಂತಿಲ್ಲ. ಹೀಗಾಗಿ ಜಾಮೀನು ನೀಡಬೇಕು ಎಂದು ನಲಪಾಡ್ ಮನವಿ ಅಂತ ಮನವಿ ಮಾಡಿಕೊಂಡಿದ್ದ.

By suddi9

Leave a Reply

Your email address will not be published. Required fields are marked *