ಬಂಟ್ವಾಳ:ಎದುರಾಳಿ ಶಕ್ತಿವಂತನಿರಲಿ, ಯಾರೇ ಅಗಿರಲಿ, ಅವರ ಬಗ್ಗೆ ತಲೆಕಡಿಸಿಕೊಳ್ಳದೆ, ನಮ್ಮ ಕಾರ್ಯತಂತ್ರ, ಚಿಂತನೆಯನ್ನು ಕಾರ್ಯಕರ್ತರು ಸರಿಯಾಗಿ ಸಾಕಾರಗೊಳಿಸಿದಲ್ಲಿ 150 ಸ್ಥಾನ ಗೆಲ್ಲುವ ಗುರಿ ತಲುಪುದು ನಿಶ್ಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಮಂಗಳವಾರ ಬಿ.ಸಿ.ರೋಡಿನ ಉದ್ಯಾನವನದ ಪಕ್ಕದ ಕಲಾಮಂದಿರದಲ್ಲಿ ನಡೆದ ಬಿಜೆಪಿಯ ನವಶಕ್ತಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ದೇವದುರ್ಲಭ ಕಾರ್ಯಕರ್ತರ ನೆರವಿನಿಂದ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದ್ದು, ಉತ್ತರ ಪ್ರದೇಶ ಮಾದರಿಯಲ್ಲಿ ಕರ್ನಾಟಕವೂ ಕಾಂಗ್ರೇಸ್ ಮುಕ್ತವಾಗಲಿದೆ ಎಂದರು.

20mng73

ಕಾರ್ಯಕರ್ತರು ಜಿಲ್ಲೆ, ತಾಲೂಕು, ಕ್ಷೇತ್ರದ ಬಗ್ಗೆ ಚಿಂತೆ ನಡೆಸದೆ, ತಮ್ಮ ಬೂತ್ ಗಳ ಬಗ್ಗೆ ಹೆಚ್ಚಿನ ಜವಬ್ದಾರಿ ವಹಿಸಿ, ತಮ್ಮ ಬೂತ್ ಗಳಲ್ಲಿ ಶೇ.65-70 ರಷ್ಟು ಮತದಾನ ನಡೆಯುವಂತೆ ನೋಡಿಕೊಳ್ಳುವ ಮೂಲಕ ಕ್ಷೇತ್ರದ ಗೆಲುವಿಗೆ ಕಾರಣರಾಗುವಂತೆ ಮನವಿ ಮಾಡಿದರು.

ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮತ್ತು ತಪ್ಪು ಮಾಹಿತಿ ನೀಡುವವರ ಬಗ್ಗೆ ಜಾಗ್ರತೆ ವಹಿಸಿ, ಪ್ರತ್ಯುತ್ತರ ನೀಡಬೇಕು. ರಾಜ್ಯದಲ್ಲಿ ರುವ ಭ್ರಷ್ಟ ಸಿದ್ದರಾಮಯ್ಯ ಸರ್ಕಾರವನ್ನು ಕಿತ್ತೊಗೆಯಲು ಕಾರ್ಯಕರ್ತರು ಮುಂದಿನ 2 ತಿಂಗಳು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಬೇಕೆಂದರು.

ಅಧಿಕಾರಕ್ಕೇರಿದ ಬಳಿಕ ಒಂದು ದಿನವೂ ವಿಶ್ರಾಂತಿ ಪಡೆಯದೆ, ಪ್ರತಿನಿಮಿಷವೂ ದೇಶಕ್ಕೆ ಪೂರಕವಾದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಧಾನಿ ಮೋದಿಯವರು ಯುವಜನತೆಯ ಮೇಲೆ ವಿಶೇಷವಾದ ಅಭಿಮಾನವನ್ನು ಹೊಂದಿದ್ದು, ಕಳೆದ ಮೂರೂವರೆ ವರ್ಷದ್ತವರ ಆಡಳಿತವನ್ನು ಜಗತ್ತು ಅಚ್ಚರಿಯಿಂದ ನೋಡುತ್ತಿದೆ . ಮೋದಿಯ ಜನಪರ ಯೋಜನೆಗಳು ಚುನಾವಣೆಯ ಸಂದರ್ಭದಲ್ಲಿ ಪರಿಣಾಮ ಬೀರಲಿದೆ ಎಂದರು.

ಹಣ ಮತ್ತು ಕಮಿಷನ್ ಸರಕಾರ:
ಕಾಂಗ್ರೇಸ್ ಹಣ ಮತ್ತು ಕಮಿಷನ್ ಆಧಾರದಲ್ಲಿ ಮುನ್ನಡೆಯುತ್ತಿರುವ ಪಕ್ಷ ಎಂದು ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುರಳೀಧರ ರಾವ್ ಟೀಕಿಸಿದರು.
ಹತ್ಯೆ, ಭ್ರಷ್ಟಾಚಾರ ಕಾಂಗ್ರೇಸ್ ಸಂಸ್ಕøತಿಯಾಗಿದ್ದು, ಕಾಂಗ್ರೇಸ್ ನ ಅಹಂಕಾರವನ್ನು ದಮನಿಸಬೇಕಾಗಿದೆ ಎಂದ ಅವರು, ಪ್ರಧಾನ ನರೇಂದ್ರ ಮೋದಿ ಹಾಗೂ ರೈತನಾಯಕ ಯಡಿಯೂರಪ್ಪ ಕರ್ನಾಟಕಸ ವಿಕಾಸದ ಜೋಡಿಯಾಗಿದೆ ಎಂದರು. ನಮ್ಮಲ್ಲಿ ಯಾವುದೇ ರಹಸ್ಯ ತಂತ್ರಗಳಿಲ್ಲ. ಮಾಧ್ಯಮದ ಮುಂದೆಯೇ ಎಲ್ಲವನ್ನೂ ಬಿಚ್ಚಿದ್ದೇವೆ. ಸಾಧ್ಯವಿದ್ದರೆ ಕಾಂಗ್ರೆಸ್ ಪಕ್ಷ ಕೂಡ, ತಮ್ಮ ಕಾರ್ಯತಂತ್ರದ ರಹಸ್ಯವನ್ನು ಮಾಧ್ಯಮ ಪ್ರತಿನಿಧಿಗಳ ಮುಂದೆ ಹೇಳಿಕೊಳ್ಳಲಿ ಎಂದು ಸವಾಲೆಸೆದ ಅವರು, ಮುಂದೆ ಬಿಜೆಪಿ ಅಧಿಕಾರಕ್ಕೆ ಬಂದರೂ, ಎಲ್ಲವೂ ಪಾರದರ್ಶಕವಾಗಿ ನಡೆಯಲಿದೆ ಎಂದರು.

ಸಿ.ಟಿ.ರವಿಯಿಂದ ಕ್ಲಾಸ್:
ಬಿಜೆಪಿ ರಾಜ್ಯ ಪ್ರ.ಕಾರ್ಯದರ್ಶಿ, ಶಾಸಕ ಸಿ.ಟಿ.ರವಿಯವರು ಅಮಿತ್ ಶಾ ಅವರು ಅಗಮನಕ್ಕೆ ಮುನ್ನ ನವರತ್ನರಿಗೆ ಕ್ಲಾಸ್ ತೆಗೆದು ಕೊಂಡು, ಬೂತ್ ಕಾರ್ಯತಂತ್ರದ ಬಗ್ಗೆ ಮಾಹಿತಿ ನೀಡಿದರು.
ನಕಲಿ ಮತದಾನದ ಬಗ್ಗೆ ಕಾರ್ಯಕರ್ತರು ಜಾಗೃತರಾಗಬೇಕೇಂದು ಕರೆ ನೀಡಿದ ಅವರು, ಕಳೆದ ಚುನಾವಣೆಯಲ್ಲಿ ಇಂತಹ ನಕಲಿಮತಗಳಿಂದ ಕಾಂಗ್ರೇಸ್ ಗೆಲುವು ಪಡೆದಿದೆ, ಈ ಹಿನ್ನೆಲೆಯಲ್ಲಿ ನಕಲಿಮತದಾರರ ಬಗ್ಗೆ ಮತಗಟ್ಟೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು, ಪ್ರತೀ 15 ದಿನಗಳಿಗೊಮ್ಮೆ ಬೂತ ಮಟ್ಟದ ಸಭೆ ನಡೆಸಬೇಕು, ಸಾಮಾಜಿಕ ಜಾಲತಾಣವನ್ನು ಉಪಯೋಗಿಸಬೇಕು, ಪ್ರತೀ ಬೂತ್ ನ ಐದು ಕಡೆಗಳಲ್ಲಿ ಕಮಲದ ಚಿಹ್ನೆ ಹಾಗೂ ಈ ಬಾರಿ ಬಿಜೆಪಿ ಸರ್ಕಾರ ಎನ್ನುವ ಗೋಡೆಬರಹವನ್ನು ತಕ್ಷಣವೇ ಬರೆಸುವಂತೆ ಸೂಚಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಮುಂದಿನ ಪ್ರತೀ ‘ಮನ್ ಕೀ ಬಾತ್’ ಕಾರ್ಯಕ್ರಮ ಆಲಿಸಲು ಗ್ರಾಮ ಮಟ್ಟದಲ್ಲಿ ಚಹಾ ಮತ್ತು ಪಕೋಡ ಸಹಿ ರೇಡಿಯೋ ಕಾರ್ಯಕ್ರಮ ಬಿತ್ತರಿಸಬೇಕು ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು. ಹೊಸ ಮತದಾರರ ಸೇರ್ಪಡೆ ಮತ್ತು ಅಕ್ರಮ ಮತದಾರರು ಮತ್ತು ಮೃತಪಟ್ಟ ಸದಸ್ಯರ ಹೆಸರು ತೆರವುಗೊಳಿಸುವಲ್ಲಿ ಶ್ರಮಿಸಬೇಕು. ರಾಜ್ಯದ ಕಾಂಗ್ರೇಸ್ ಸರ್ಕಾರ ಬದಲಾಗಬೇಕು, ನಾವು ಬದಲಾಯಿಸಬೇಕು, ಈ ಬಾರಿ ಬಿಜೆಪಿ ಮೊದಲಾದ ಘೋಷಣೆಗಳು ಸಮಾವೇಶದುದ್ದಕ್ಕೂ ಕೇಳಿಬಂತು.
ಕೀ ಓಟರ್ಸ್: ಅತ್ತವೂ ಅಲ್ಲ, ಇತ್ತವೂ ಅಲ್ಲದೆ, ಸ್ಥಿರವಾಗಿರುವ ಮತದಾರರನ್ನು ಮನವೊಲಿಸಿ ಬಿಜೆಪಿಗೆ ಬೆಂಬಲಿಸುವುದು ಅಥವಾ ಮತದಾನಕ್ಕೆ ಪ್ರೇರೇಪಿಸಬೇಕು, ಮತದಾರರ ಪಟ್ಟಿಯನ್ನು ತಕ್ಷಣ ಪಡೆಯಬೇಕು, ಆದೇ ನಮ್ಮ ಆಸ್ತಿ ಎಂದರು.

ಭ್ರಷ್ಟಾಚಾರದಲ್ಲಿ ನಂಬರ್ 1:
ಪಕ್ಷ ಬೆಳೆದು ಬಂದ ರೀತಿಯನ್ನು ವಿವರಿಸಿದರಲ್ಲದೆ 10 ಮಂದಿಯಿಂದ ಆರಂಭವಾದ ಬಿಜೆಪಿ ಪ್ರಸ್ತುತ 12 ಕೋಟಿ ಸದಸ್ಯತ್ವವನ್ನು ಹೊಂದಿ ವಿಶ್ವದಲ್ಲೇ ನಂ.1 ಆಗಿದೆ ಎಂದರು.
ಕರ್ನಾಟಕ ಸರಕಾರ ಭ್ರಷ್ಟಾಚಾರದಲ್ಲಿ ನಂಬರ್ 1,ಅತ್ಯಾಚಾರದಲ್ಲಿ ನಂಬರ್ 2 ಸ್ಥಾನದಲ್ಲಿದ್ದರೆ,ಹಿಂದು ಯುವಕರ ಕಗ್ಗೊಲೆ, ಧರ್ಮ, ಧರ್ಮಗಳು, ಜಾತಿಜಾತಿ ನಡುವೆ ಎತ್ತಿ ಕಟ್ಟವ ಮೂಲಕ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಕೇಂದ್ರದ ಯೋಜನೆಯನ್ನು ಜಾರಿಗೆ ರಾಜ್ಯ ಸರಕಾರ ಅಡ್ಡಗಾಲಿಕ್ಕುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಮತಗಟ್ಟೆಯನ್ನು ಗೆಲ್ಲುವ ಮೂಲಕವಿಧಾನಸಭಾಕ್ಷೇತ್ರವನ್ನು ಗೆಲ್ಲವುದರೊಂದಿಗೆ ಕರ್ನಾಟಕದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವಂತಾಗಬೇಕು ಎಂದರು.

By suddi9

Leave a Reply

Your email address will not be published. Required fields are marked *