CM_Siddaramaiah_760x400

ಅಥಣಿ: ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸುವ ಪ್ರಧಾನಿ ಮೋದಿ ಅವರ ಬಳಿ ದಾಖಲೆಗಳಿದ್ದರೆ ಬಹಿರಂಗ ಪಡೆಸಿಲಿ. ಆದರೆ ಬೇಜವಾಬ್ದಾರಿಯಿಂದ ಸುಳ್ಳು ಆರೋಪ ಮಾಡಿದರೆ ದೇಶದ ಪ್ರಧಾನಿಯಾಗಿ ಮುಂದುವರೆಯಲು ಅವರು ನಾಲಾಯಕ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಅಥಣಿ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ 2ನೇ ಹಂತದ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಲಗುವಾಗಿ ಮಾತನಾಡುತ್ತಿಲ್ಲ ಬದಲಾಗಿ ಗಂಭೀರ ಆರೋಪ ಮಾಡುತ್ತಿರುವುದಾಗಿ ತಿಳಿಸಿದರು.

ನೀರವ್ ಮೋದಿ, ಲಲಿತ ಮೋದಿ, ಪ್ರಧಾನಿ ಮೋದಿ ಅವರ ಕುಮ್ಮಕ್ಕಿನಿಂದಲೇ ದೇಶ ಕೊಳ್ಳೆ ಹೊಡೆದು ಪರಾರಿಯಾಗಿದ್ದಾರೆ ಎಂದು ಆರೋಪಿಸಿದ ಅವರು, ಭ್ರಷ್ಟಾಚಾರದಲ್ಲಿ ತೊಡಗಿ ಜೈಲಿಗೆ ಹೋಗಿ ಬಂದು ನಿಮ್ಮ ಪಕ್ಕದಲ್ಲಿಯೇ ಕುಳಿತಿರುವ ಬಿಎಸ್ ವೈ, ಅಮಿತ್ ಶಾ, ಬಗ್ಗೆ ನಿಮಗೆ ನೆನಪಿಗೆ ಬರಲ್ವಾ? ಬಿಎಸ್ ವೈ ಮುಂದಿಟ್ಟು ಕೊಂಡು ಓಟು ಕೇಳಲು ಜನರ ಮುಂದೆ ಬರುತ್ತಿದ್ದೀರಿ ನಿಮಗೆ ನಾಚಿಕೆ ಆಗಲ್ವಾ? ಎಂದು ಪ್ರಶ್ನಿಸಿದರು.

ದೇಶದಲ್ಲಿ ನುಡಿದಂತೆ ನಡೆದ ಸರ್ಕಾರ ಯಾವುದಾದರು ಇದ್ದರೆ ಅದು ನಮ್ಮ ಕಾಂಗ್ರೆಸ್ ಸರ್ಕಾರ. ನಾವು ಅದಿಕಾರಕ್ಕೆ ಬರುವ ಮುಂಚೆ ನೀಡಿದ 165 ಭರವಸೆಗಳಲ್ಲಿ 155 ಭರವಸೆಗಳನ್ನು ಈಡೇರಿಸಿದ್ದೇವೆ. ನೀವು ನೀಡಿದ ಭರವಸೆಗಳಲ್ಲಿ ಈಡೇರಿಸಿದ್ದೀರಾ? ಎಂದು ಟೀಕಿಸಿದರು.

ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ  ಜಮಾ ಮಾಡುತ್ತೇನೆ ಎಂದವರು ಇಲ್ಲಿಯವರೆಗೆ ಒಂದು ಸಾವಿರ ರೂಪಾಯಿಯಾದ್ರು ಬಂತೇನ್ರಿ. 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿ ಯುವಕರನ್ನು ಕಂಗಾಲು ಮಾಡಿದ್ದೀರಿ. ಇದೇನಾ ಅಚ್ಛೆ ದಿನ್ ಎಂದು ವ್ಯಂಗ್ಯವಾಡಿದರು.

ಗುಜರಾತ್ ಮಾದರಿ ರಾಜ್ಯ ಎನ್ನುವವರು ಇಂದು ಕಾರ್ನಾಟಕ ದೇಶಕ್ಕೆ ಮಾದರಿ ಎನ್ನುವಂತಾಗಿದೆ. ಮೋದಿ, ಶಾ ರಾಜ್ಯಕ್ಕೆ ನೂರು ಬಾರಿ ಬಂದು ಪ್ರಚಾರ ಮಾಡಿದರು ಜನರು ಅವರ ಮಾತಿಗೆ ಮರಳಾಗುವುದಿಲ್ಲ. ಮತ್ತೆ ರಾಜ್ಯದಲ್ಲಿ ಕಾಂಗ್ರಸ್ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಭವಿಷ್ಯ ನುಡಿದರು.

 

By suddi9

Leave a Reply

Your email address will not be published. Required fields are marked *