murder-e1508519202510

ಮಂಗಳೂರು: ಕೌಟುಂಬಿಕ ಕಲಹ ವಿಕೋಪಕ್ಕೆ ತಿರುಗಿ ವ್ಯಕ್ತಿ ಕೊಲೆಯಲ್ಲಿ ಅಂತ್ಯ ಕಂಡ ಘಟನೆ ನಗರದ ಪಡೀಲ್ ನ ನೂತನ ರೈಲ್ವೆ ಸೇತುವೆ ಬಳಿ ಶುಕ್ರವಾರ ತಡರಾತ್ರಿ ನಡೆದಿದೆ.

ತಮಿಳುನಾಡು ಮೂಲದವರಾದ ಲಾರಿ ಚಾಲಕ ಚೆಲ್ಲಮಣಿ(38) ಮೃತಪಟ್ಟವರರು ಹಾಗೂ ಆರೋಪಿಯನ್ನು  ಸುರೇಶ್ ಕುಮಾರ್ ಎಂದು ಗುರುತಿಸಲಾಗಿದೆ.

ಚೆಲ್ಲಮಣಿ ಹಾಗೂ ಆರೋಪಿ ಸುರೇಶ್ ಕುಮಾರ್ ನಡುವೆ ಕೌಟುಂಬಿಕ ಕಲಹ ನಡೆದು ಬಳಿಕ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಬಿದ್ದ ಪರಿಣಾಮ ಸುರೇಶ್, ಚೆಲ್ಲಮಣಿ ಅವರನ್ನು  ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದ್ದು, ಘಟನೆಯಿಂದ ಆರೋಪಿ ಸುರೇಶ್ ಕುಮಾರ್ ತಲೆಮರೆಸಿಕೊಂಡಿದ್ದಾನೆ.

ಈ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By suddi9

Leave a Reply

Your email address will not be published. Required fields are marked *