ಬೆಂಗಳೂರು: ಅಪಾರ್ಟ್ ಮೆಂಟ್ ನ 3ನೇ ಮಹಡಿಯಿಂದ ಬಿದ್ದು ತಾಯಿ, ಮಗ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ಕಾಡುಗೋಡಿಯ ಬೆಳ್ತೂರಿನಲ್ಲಿ ನಡೆದಿದೆ.
ಮೃತರನ್ನು ಯಾದಗಿರಿ ಮೂಲದ ತಾಯಿ ಸುಂದರಮ್ಮ(55) ಹಾಗೂ ಮಗ ಮೌನೇಶ್(36) ಎಂದು ಗುರುತಿಸಲಾಗಿದೆ.
ಮೌನೇಶ್ ಅವರಿಗೆ ಅದೇ ಅಪಾರ್ಟ್ ಮೆಂಟ್ ನಲ್ಲಿದ್ದ ಇನ್ಸ್ ಪೆಕ್ಟರ್ ಚಂದ್ರಪ್ಪ ಅವರ ತಂಗಿ ಜತೆ ಪ್ರೇಮವಿದ್ದು, ಅವರು ಈ ಹಿಂದೆ ಮೂರು ಬಾರಿ ಮನೆ ಬಿಟ್ಟು ಹೋಗಿದ್ದರು. ಇದರಿಂದ ಕೋಪಗೊಂಡಿದ್ದ ಚಂದ್ರಪ್ಪ, ಮೌನೇಶ್ ಹಾಗೂ ಅವರ ತಾಯಿಯನ್ನು ತಂದು ಕೂಡಿಹಾಕಿದ್ದರು ಎನ್ನುವ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ.
ಈ ಬಗ್ಗೆ ಕಾಡುಗೋಡಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
