ಹೊಸದಿಲ್ಲಿ: ಕಾಶ್ಮೀರ ಎಂದೆಂದಿಗೂ ನಮ್ಮದೇ. ಕಾಶ್ಮೀರವನ್ನು ನಮ್ಮಿಂದ ಕಸಿದುಕೊಳ್ಳುವ ಶಕ್ತಿ ವಿಶ್ವದಲ್ಲಿ ಯಾರಿಗೂ ಇಲ್ಲ ಎಂದು ಗೃಹ ಸಚಿವ ರಾಜ್ನಾಥ್ ಸಿಂಗ್ ಪಾಕಿಸ್ತಾನಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ದಿಲ್ಲಿಯಲ್ಲಿ ಸಿಎನ್ಎನ್ ನ್ಯೂಸ್ 18 ಏರ್ಪಡಿಸಿದ್ದ ರೈಸಿಂಗ್ ಇಂಡಿಯಾ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದ ಪ್ರಾದೇಶಿಕ ಸಮಗ್ರತೆ ಕಾಪಾಡಲು ಅಗತ್ಯವಿದ್ದರೆ ನಮ್ಮ ಯೋಧರು ಗಡಿ ದಾಟಲು ಸಮರ್ಥರಿದ್ದಾರೆ’. ‘ಕಾಶ್ಮೀರಕ್ಕೆ ಶಾಶ್ವತ ಪರಿಹಾರ ಒದಗಿಸಲು ಸರಕಾರ ಉತ್ಸುಕವಾಗಿದೆ. ಎಲ್ಲರೊಂದಿಗೆ ಮಾತನಾಡಲು ಮುಕ್ತವಾಗಿದ್ದೇವೆ. ಎಲ್ಲ ವರ್ಗದ ಜನರನ್ನು ಚರ್ಚೆಗೆ ಆಹ್ವಾನಿಸಲು ಸರಕಾರವು ಗುಪ್ತಚರ ಇಲಾಖೆಯ ಮಾಜಿ ಮುಖ್ಯಸ್ಥ ದಿನೇಶ್ವರ್ ಶರ್ಮರನ್ನು ನೇಮಕ ಮಾಡಿದೆ ಎಂದಿದ್ದಾರೆ.
ಮೊದಲ ಬಾರಿ ಕಲ್ಲುತೂರಾಟ ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಪ್ರಕರಣವನ್ನು ಕೈಬಿಡುವಂತೆ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ್ ಮುಫ್ತಿ ಅವರಲ್ಲಿ ವಿನಂತಿಸಿಕೊಂಡಿದ್ದೆ’ ಎಂದು ಹೇಳಿದ್ದಾರೆ.
