ಮಂಗಳೂರು: ಭೂಮಾಪಕರು ಮತ್ತು ಸುನೀಲ್ ಸ್ನೇಹಿತರ ಬಳಗ ಹಾಗೂ ಸೇವಾಂಜಲಿ ಪ್ರತಿಷ್ಠಾನ ಪರಂಗಿಪೇಟೆ ಸಂಯುಕ್ತಾಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ಮಂಗಳೂರು ಸಹಯೋಗದಲ್ಲಿ ದಿ. ಸುನೀಲ್ ನಾಟೆಕಲ್ ಶ್ರದ್ಧಾಂಜಲಿ ಪ್ರಯುಕ್ತ ಎ.8ರಂದು ರಕ್ತದಾನ ಶಿಬಿರ ನಗರದ ಕರ್ನಾಟಕ ಸರ್ಕಾರಿ ನೌಕರರ ಕಟ್ಟದಲ್ಲಿನ ನಂದಿನಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಗ್ಗೆ 9ಕ್ಕೆ ಪ್ರಾರಂಭಗೊಳ್ಳುವ ಶಿಬಿರವನ್ನು ದ.ಕ. ಜಿಲ್ಲಾ ಭೂ ದಾಖಲೆಗಳ ಉಪನಿರ್ದೇಶಕ ಬಿ.ಕೆ.ಕುಸುಮಾಧರ ಉದ್ಘಾಟಿಸಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಹಿಸಬೇಕು ಎಂದು ಪ್ರಕಟನೆ ಕೋರಿದೆ.
