ಬಂಟ್ವಾಳ:ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ಉಪ್ಪಿರ ಎಂಬಲ್ಲಿ ಕಾರಣಿಕ ಪ್ರಸಿದ್ಧ ಮುಜಿಲ್ನಾಯ ದೈವಸ್ಥಾನವು ಸಂಪೂರ್ಣ ಪುನರ್ ನವೀಕರಣಗೊಂಡು ಇದೇ 19ರಿಂದ 22ರತನಕ ಪೂಂಜ ಕ್ಷೇತ್ರದ ಕೃಷ್ಣಪ್ರಸಾದ ಅಸ್ರಣ್ಣರ ನೇತೃತ್ವದಲ್ಲಿ ದೈವಗಳ ಪುನರ್ ಪ್ರತಿಷ್ಠೆ ಮತ್ತು ಕಲಶಾಭಿಷೇಕ ಹಾಗೂ ನೇಮೋತ್ಸವ ನಡೆಯಲಿದೆ.
ಇಲ್ಲಿನ ಐದು ಗ್ರಾಮಗಳಿಗೆ ಸಂಬಂಧಿಸಿದಂತೆ ಜೀರ್ಣಾವಸ್ಥೆಯಲ್ಲಿದ್ದ ರಾಜನ್ ದೈವ ಶ್ರೀ ಕೊಡಮಣಿತ್ತಾಯ, ಮುಜಿಲ್ನಾಯ ದೈವಸ್ಥಾನವು ಇದೀಗ ಭಕ್ತರ ಒಗ್ಗೂಡುವಿಕೆಯಲ್ಲಿ ಆಕರ್ಷಕವಾಗಿ ಸಂಪೂರ್ಣ ಪುನರ್ ನವೀಕರಣಗೊಂಡು ಆಕóರ್ಷಕವಾಗಿದೆ.
ಇದೇ 19ರಂದು ಸಂಜೆ 5ಗಂಟೆಗೆ ಆರಂತಾಡಿ ಅರಮನೆ ಭಂಡಾರ ಚಾವಡಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಅಂದು ಸಂಜೆ 4ಗಂಟೆಗೆ ಸಿದ್ಧಕಟ್ಟೆ ಬಿಲ್ಲವ ಸಮುದಾಯ ಭವನ ಬಳಿಯಿಂದ ಆಕರ್ಷಕ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಇದೇ 20ರಂದು ಬೆಳಿಗ್ಗೆ 11 ಗಂಟೆಗೆ ಮುಜಿಲ್ನಾಯ ದೈವದ ಪುನರ್ ಪ್ರತಿಷ್ಠೆ ಮತ್ತು ಕಲಶಾಭಿಷೇಕ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ರಾಥ್ರಿ 7ಗಂಟೆಗೆ ಗಗ್ಗರ ಸೇವೆ ನಡೆಯಲಿದೆ.

18btl-Uppira
ಇದೇ 21ರಂದು ಸಂಜೆ ಉಪ್ಪಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದು ಸಂಗಬೆಟ್ಟು ಗುತ್ತಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಬರಲಿದ್ದು, ಆರಂತಾಡಿ ಅರಮನೆಯಿಂದ ಮುಜಿಲ್ನಾಯ ದೈವದ ಭಂಡಾರ ಬರಲಿದೆ.
ಇದೇ 22ರಂದು ಬೆಳಿಗ್ಗೆ 10.52 ಗಂಟೆಗೆ ಶ್ರೀ ಕೊಡಮಣಿತ್ತಾಯ, ಮುಜಿಲ್ನಾಯ ದೈವಗಳ ಪುನರ್ ಪ್ರತಿಷ್ಠೆ ಮತ್ತು ಕಲಶಾಭಿಷೇಕ ಹಾಗೂ ಮೂಡು ಪಾಲ್ಜಾಲಿನಿಂದ ಭಂಡಾರ ಬಂದು ರಾತ್ರಿ ನೇಮೋತ್ಸವ ನಡೆಯಲಿದೆ. ಅಂದು ಬೆಳಿಗ್ಗೆ 11ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಮಾರೂರು ಖಂಡಿಗ ರಾಮದಾಸ ಅಸ್ರಣ್ಣ ಆಶೀರ್ವಚನ ನೀಡಲಿದ್ದು, ಮೂಡುಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ , ಪಡ್ಯಾರಬೆಟ್ಟು ಕ್ಷೇತ್ರದ ಅನುವಂಶಿಕ ಮೊಕ್ತೇಸರ ಎ.ಜೀವಂಧರ ಕುಮಾರ್, ಮಾಣಿಲ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದ ಮೊಕ್ತೇಸರ ಎಂ.ಕೆ.ಕುಕ್ಕಾಜೆ ಮತ್ತಿತರ ಅನೇಕ ಗಣ್ಯರು ಭಾಗವಹಿಸುವರು ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಸಂತ ಶೆಟ್ಟಿ ಕೇದಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *