ಬೆಂಗಳೂರು: ಎ.6ಕ್ಕೆ ಎಸೆಸೆಲ್ಸಿ ಪರೀಕ್ಷೆ ಮುಗಿದಿದ್ದು, ಉತ್ತರ ಪತ್ರಿಕೆ ಮೌಲ್ಯಮಾಪನ ಕಾರ್ಯ ಮಂಗಳವಾರದೊಳಗೆ ಪೂರ್ಣಗೊಳ್ಳಲಿದೆ. ಮೇ 7ಕ್ಕೂ ಮೊದಲೇ ಫಲಿತಾಂಶ ನೀಡುವ ಯತ್ನ ಸಾಗಿದೆ.
ಫಲಿತಾಂಶವನ್ನು ಮೇ 7ಕ್ಕೆ ಪ್ರಕಟಿಸಲಿದ್ದು, ಮೇ 8ಕ್ಕೆ ಶಾಲೆಗಳಿಗೆ ತಲುಪಿಸಲಿದ್ದೇವೆ. ಪ್ರಥಮ ಪಿಯುಸಿ ತರಗತಿ ಮೇ 14ಕ್ಕೆ ಆರಂಭವಾಗುವುದರಿಂದ ಮೇ 7ಕ್ಕೂ ಮೊದಲೇ ಫಲಿತಾಂಶ ನೀಡುವ ಬಗ್ಗೆಯೂ ಚಿಂತನೆ ನಡೆಸುತ್ತಿದ್ದೇವೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ವಿ.ಸುಮಂಗಲಾ ತಿಳಿಸಿದರು.
