6

ಮಂಗಳೂರು:  ಬಿಜೆಪಿ ವಿರುದ್ಧ ಮಾತನಾಡುವವರ ಸ್ನೇಹ ನನಗೆ ಬೇಕಿಲ್ಲ. ತಮಗೆ ಬಿಜೆಪಿಯಿಂದ ಟಿಕೆಟ್ ತಪ್ಪಿರುವುದಕ್ಕೆ ಯಾವುದೇ ಬೇಸರವಿಲ್ಲ ಎಂದು ರಹೀಂ ಉಚ್ಚಿಲ್ ರವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಮಂಗಳೂರು ಭಾಗದಿಂದ ಬಿಜೆಪಿ ಪರ ಟಿಕೆಟ್ ಆಕಾಂಕ್ಷಿಯಾಗಿದ್ದ ರಾಜ್ಯ ಬ್ಯಾರಿ ಸಹಿತ್ಯ ಅಕಾಡೆಮಿಯ ಅಧ್ಯಕ್ಷ ಹಾಗೂ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿರುವ ರಹೀಂ ಉಚ್ಚಿಲ್ ರವರು, ತಮಗೆ ಬಿಜೆಪಿಯಿಂದ ಟಿಕೆಟ್ ತಪ್ಪಿರುವುದಕ್ಕೆ ಯಾವುದೇ ಬೇಸರವಿಲ್ಲ ಎಂದು ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡು ಮತ್ತೊಮ್ಮೆ ಪಕ್ಷದ ಬಗ್ಗೆ ಪ್ರಾಮಾಣಿಕತೆಯನ್ನು ತೋರಿಸಿದ್ದಾರೆ.

“ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮುಗಿದು ಹೋದ ಅಧ್ಯಾಯ. ಟಿಕೆಟ್‌ ಲಭಿಸಿಲ್ಲ ಎಂದು ನಮ್ಮ ನಾಯಕರ ವಿರುದ್ಧ ಸಾಮಾಜಿಕ ತಾಣದಲ್ಲಿ ಪೋಸ್ಟ್ ಹಾಕುವುದು ಸರಿಯಲ್ಲ. ನಾನು ಈಗಾಗಲೇ ಪಕ್ಷದ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡುತ್ತಿದ್ದೇನೆ. ಯಾರಾದರೂ ನನ್ನ ಬೆಂಬಲಿಗರು ಪಕ್ಷದ ವಿರುದ್ದ ಅಪಸ್ವರ ಎತ್ತಿದರೆ, ಅದಕ್ಕೆ ಅವರೇ ನೇರ ಹೊಣೆ. ಪಕ್ಷದ ವಿರುದ್ಧ ಮಾತನಡುವವರ ಸ್ನೇಹ ನನಗೂ ಬೇಕಿಲ್ಲ (ಇದು ಬಿಜೆಪಿಯೇತರ ಸ್ನೇಹಿತರಿಗೆ ಅನ್ವಯವಾಗುವುದಿಲ್ಲ). ಪ್ರೀತಿ, ವಿಶ್ವಾಸ, ಅಭಿಮಾನಕ್ಕೆ ಧನ್ಯವಾದಗಳು” ಎಂದು ತಮ್ಮ ಫೇಸ್ಬುಕ್ ಗೋಡೆಯಲ್ಲಿ ಪೋಸ್ಟ್ ಮಾಡಿದ್ದಾರೆ.

 

By suddi9

Leave a Reply

Your email address will not be published. Required fields are marked *