879oygu

ಮಂಗಳೂರು: ಹಬ್ಬ ಹರಿದಿನಗಳು ಬಂದಾಗ ತರಕಾರಿ/ ಹಣ್ಣು ಹಂಪಲುಗಳ ಬೆಲೆಗಳಲ್ಲಿ ಏರು ಪೇರು ಆಗುವುದು ಸ್ವಾಭಾವಿಕ. ಇದೀಗ ಮುಸ್ಲಿಮರ ಪವಿತ್ರ ಹಬ್ಬ ರಮ್ಜಾನ್‌ ಅಂಗವಾಗಿ ಮೂವತ್ತು ದಿನಗಳ ವ್ರತಾಚರಣೆ ಆರಂಭವಾಗಿದೆ.

ಉಪವಾಸ ವ್ರತಾಚರಣೆಯ ಸಂದರ್ಭದಲ್ಲಿ ದೈಹಿಕವಾಗಿ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳನ್ನು ನಿಯಂತ್ರಿಸುವ ಸಲುವಾಗಿ ಹಣ್ಣು ಹಂಪಲು ಅಥವಾ ತರಕಾರಿಗಳನ್ನು ಎಂದಿಗಿಂತ ಒಂದಿಷ್ಟು ಜಾಸ್ತಿ ಬಳಕೆ ಮಾಡುವುದು ಸಾಮಾನ್ಯ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಮಾರುಕಟ್ಟೆಯಲ್ಲಿ ಆಯ್ದ ಹಣ್ಣು ಮತ್ತು ತರಕಾರಿಗಳ ಬೆಲೆಗಳು ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿವೆ.

ಹಣ್ಣು ಹಂಪಲುಗಳ ಪೈಕಿ ವಿಶೇಷವಾಗಿ ಪಪ್ಪಾಯಿ ಬೆಲೆ ಹೆಚ್ಚಳವಾಗಿದೆ. ರಮ್ಜಾನ್‌ ತಿಂಗಳು ಆರಂಭವಾಗುವ ಮೊದಲು ಪಪ್ಪಾಯಿ ಬೆಲೆ 40 ರೂ. ಇದ್ದು, ಈಗ ಅದು 60 ರೂಪಾಯಿಗೇರಿದೆ. ಇತರ ಹಣ್ಣುಗಳ ಬೆಲೆಗಳಲ್ಲಿ ಹೆಚ್ಚಿನ ವ್ಯತ್ಯಾಸ ಕಂಡು ಬಂದಿಲ್ಲ.

ರಮ್ಜಾನ್‌ ತಿಂಗಳಲ್ಲಿ ಪಪಾಯಿಯನ್ನು ಹೆಚ್ಚಾಗಿ ಜ್ಯೂಸ್‌ ತಯಾರಿಸಲು ಉಪಯೋಗಿಸುತ್ತಾರೆ. ಕೆಲವರು ಚಿಪ್ಪಡ್‌, ಕಲ್ಲಂಗಡಿ ಅಥವಾ ಮಲ್ಲಿಕಾ ಮಾವಿನ ಹಣ್ಣಿನ ಜ್ಯೂಸ್‌ ಸೇವನೆ ಮಾಡುತ್ತಾರೆ. ಇನ್ನೂ ಕೆಲವರು ದಾಳಿಂಬೆ, ಸೇಬು ಹಣ್ಣು ಮತ್ತು ಬಾಳೆ ಹಣ್ಣಿನ ಸಲಾದ್‌ ಮಾಡಿ ಐಸ್‌ಕ್ರೀಂ ಜತೆ ಬೆರೆಸಿ ಸೇವಿಸುತ್ತಾರೆ. ಹಾಗಾಗಿ ಈ ಎಲ್ಲ ಹಣ್ಣುಗಳಿಗೆ ಬೇಡಿಕೆ ಹೆಚ್ಚಳವಾಗಿದೆ.

ಬೆಲೆ ಏರಿಕೆ: ಮಂಗಳೂರಿನ ಮಾರುಕಟ್ಟೆಗೆ ಪಪ್ಪಾಯಿ ರಾಜ್ಯದ ಚಿತ್ರದುರ್ಗ, ಹುಣಸೂರು ಮತ್ತು ಆಂಧ್ರ ಪ್ರದೇಶದಿಂದ ಆವಕವಾಗುತ್ತಿದೆ. ಹಾಗಿದ್ದರೂ ಸಾಕಷ್ಟು ಪ್ರಮಾಣದಲ್ಲಿ ಸರಬರಾಜು ಆಗದಿರುವುದರಿಂದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

 

By suddi9

Leave a Reply

Your email address will not be published. Required fields are marked *