ಬಂಟ್ವಾಳ: ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಡಿ. 28 ಮತ್ತು 29ರಂದು ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ನಡೆಯಲಿರುವ ತಾಲ್ಲೂಕು ಮಟ್ಟದ 20ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಸಾಹಿತ್ಯ ಸಂಶೋಧಕಿ ಡಾ.ಧರಣಿದೇವಿ ಮಾಲಗತ್ತಿ ಆಯ್ಕೆಯಾಗಿದ್ದಾರೆ. ಇಲ್ಲಿನ ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಸಂಜೆ ನಡೆದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಬಂಟ್ವಾಳ ಕಸಾಪ ಅಧ್ಯಕ್ಷ ಕೆ.ಮೋಹನ ರಾವ್ ಅವರು ಹೆಸರು ಪ್ರಕಟಿಸಿದರು.26btl-Mani

ಬಂಟ್ವಾಳ ತಾಲ್ಲೂಕಿನ ಮಂಚಿ ಗ್ರಾಮದ ಕುಕ್ಕಾಜೆ ನಿವಾಸಿ ಪಿ.ದೂಮಣ್ಣ ರೈ ಮತ್ತು ದೇವಕಿ ರೈ ದಂಪತಿ ಪುತ್ರಿಯಾಗಿರುವ ಇವರು ತನ್ನ ಪತಿ ಪ್ರೊ.ಅರವಿಂದ ಮಾಲಗತ್ತಿ ಸಹಿತ ದಕ್ಷ ಮತ್ತು ಯಕ್ಷ ಇಬ್ಬರು ಮಕ್ಕಳೊಂದಿಗೆ ಮೈಸೂರಿನಲ್ಲಿ ನೆಲೆಸಿದ್ದಾರೆ. ಐವತ್ತೆರಡು ಹರೆಯದ ಅವರು ಬಿಬಿಎಂ, ಎಂ.ಕಾಂ., ಕನ್ನಡ ಎಂ.ಎ., ನಿರ್ವಹಣಾ ಶಾಸ್ತ್ರದಲ್ಲಿ ಪಿಎಚ್‍ಡಿ. ಗೌರವ ಗಳಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯ ಸಹಿತ ಸೈಂಟ್ ಅಲೋಸಿಯಸ್ ಕಾಲೇಜು, ಸೈಂಟ್ ಆಗ್ನೇಸ್ ಕಾಲೇಜು, ಮೈಸೂರು ಮಹಾರಾಜ ಕಾಲೇಜು, ಮುಕ್ತ ವಿಶ್ವವಿದ್ಯಾನಿಲಯ ಹೀಗೆ 13 ವರ್ಷಗಳಲ್ಲಿ ಉಪನ್ಯಾಸಕಿಯಾಗಿ ದುಡಿದಿದ್ದಾರೆ.26btl-Dr.Dhranidevi Malagathi

ಕಳೆದ 1999ರ ಕೆಪಿಎಸ್‍ಸಿ ಪರೀಕ್ಷೆ ಬರೆದು ಕರ್ನಾಟಕ ಪೆÇಲೀಸ್ ಇಲಾಖೆಗೆ ಸೇರ್ಪಡೆಗೊಂಡು 2008ರಲ್ಲಿ ಕೊಳ್ಳೇಗಾಲದಲ್ಲಿ ಡಿಎಸ್‍ಪಿ, ಇಲಾಖಾ ವಿಚಾರಣೆಯಲ್ಲಿ ಡಿವೈಎಸ್‍ಪಿ, 2012ರ ಆಗಸ್ಟ್ ನಲ್ಲಿ ಎಎಸ್ಪಿಯಾಗಿ ಬಡ್ತಿ ಹೊಂದಿ ಮೈಸೂರಿನಲ್ಲಿ ಕರ್ನಾಟಕ ಪೆÇಲೀಸ್ ಅಕಾಡೆಮಿ ಉಪ ನಿರ್ದೇಶಕರಾದರು. 2015ರ ಆಯ್ಕೆ ಪಟ್ಟಿಯ ಐಪಿಎಸ್ ಅಧಿಕಾರಿಯಾಗಿ ಪ್ರಸ್ತುತ ಮೈಸೂರು ಜ್ಯೋತಿನಗರದಲ್ಲಿ ಪೆÇಲೀಸ್ ತರಬೇತಿ ಶಾಲೆ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಪ್ರಕಟಿತ ಕೃತಿ:

ವಿವಿಧ ಪತ್ರಿಕೆಗಳಲ್ಲಿ ಅಂಕಣ ಬರಹ, ವಿಚಾರ ಸಂಕಿರಣ, ಬ್ರೆಡ್ ಜಾಮ್, ತುಳುನಾಡ ಸಿರಿ, ವಯಸ್ಕರ ಶಿಕ್ಷಣ ಕೃತಿ, ಸ್ತ್ರೀವಾದ ಮತ್ತು ಭಾರತೀಯತೆ, ಅನಿಲ ಆರಾಧನಾ, ಸಾಹಿತ್ಯ, ವಾಣಿಜ್ಯ ಮತ್ತು ಮಹಿಳಾ ಪ್ರಜ್ಞೆ, ಈವುರಿವ ದಿವ, ಕನ್ನಡ ಸಾಹಿತ್ಯದಲ್ಲಿ ಸ್ತ್ರೀವಾದ, ದಟ್ಟ ಧರಣಿ, ಮಾನಿಷಾದ, ಇಳೆಯ ಕಣ್ಣು, ದಹರಾಕಾಶ, ಸಂಪಾದನೆ, ಮಹಿಳೆ ಮತ್ತು ಅಸಾಂಪ್ರದಾಯಿಕತೆ, ಇಳಾಭಾರತಂ-ಮಹಾಕಾವ್ಯ, ಆಯರೆ ಕೊನೆಯ ಮಾವು, ಪೆÇರ್ಲುದ ಪುರಲ್-ತುಳು ಕಾವ್ಯ, ಧರಣಿ ಚುಟುಕು ಕವಿತೆಗಳು, ಭಾಗವತ ಭಾವಗೀತೆ, ಡುಂಡುಭ ವಿಲಾಪ ಮತ್ತಿತರ ಕೃತಿ ರಚಿಸಿದ್ದಾರೆ.

ಪ್ರಶಸ್ತಿ:
ಗೊರೂರು ಪ್ರಶಸ್ತಿ, ಮಾತೋಶ್ರೀ ರತ್ನಮ್ಮ ಹೆಗಡೆ ಪ್ರಶಸ್ತಿ, ಮಾಣಿಕ ಬಾಯಿ ಪಾಟೀಲ ಪ್ರಶಸ್ತಿ, ನೀಲಗಂಗಾ ದತ್ತಿ ಬಹುಮಾನ, ಗೀತಾ ದೇಸಾಯಿ ದತ್ತಿ ಬಹುಮಾನ, ಎಚ್. ನರಸ%B

By suddi9