ಅಡ್ಡೂರು: ರಂಝಾನ್ ಹಬ್ಬ ಇನ್ನೇನು ಸನಿಹ ಬಂದಿದ್ದು, ಮುಸ್ಲಿಂ ಸಮುದಾಯದವರು ಹಬ್ಬವನ್ನು ವಿಜ್ರಂಭಣೆಯಿಂದ ಆಚರಿಸಲು ಭರದ ಸಿದ್ಧತೆ ನಡೆಸುತ್ತಿದ್ದಾರೆ. ಇನ್ನೂ ಕೆಲವರಂತು ಬಟ್ಟೆಗಳ ಖರೀದಿಯ ಗಡಿಬಿಡಿಯಲ್ಲಿ ಪಕ್ಕದ ಮಳಿಗೆಯಲ್ಲಿ ಕಡಿಮೆ ಬೆಲೆಗೆ ಸಿಗುವ ಉನ್ನತ ಗುಣ ಮಟ್ಟದ ಉಡುಪುಗಳನ್ನು ಪಕ್ಕಕ್ಕಿಟ್ಟು ದೂರ-ದೂರದ ನಗರಕ್ಕೆ ಪ್ರಯಾಣಿಸಿ ಕಡಿಮೆ ಬೆಲೆಗೆ ಸಿಗುವ ಉಡುಪನ್ನು ಭಾರೀ ಬೆಲೆಗೆ ಕೊಂಡು ತೃಪ್ತಿ ಪಟ್ಟುಕೊಳ್ಳುತ್ತಾರೆ. ಆದರೆ ಕಲರ್-ಕಲರ್ ಉಡುಪುಗಳು ಕೈಗೆಟುಕುವ ದರದಲ್ಲಿ ಸ್ಥಳೀಯ ಮಳಿಗೆಯಲ್ಲೇ ಸಿಗುವುದಾದರೆ ನಾವೇಕೆ ಕೊಂಡುಕೊಳ್ಳಲು ಮುಂದಾಗಬಾರದು.
ಇಂತಹದ್ದೇ ಅವಕಾಶವನ್ನು ಇಲ್ಲಿನ ಕೊಯ್ಯಾರ್ ಬಿಲ್ಡಿಂಗ್ ನಲ್ಲಿರುವ “ಫೈಹ ಬುರ್ಖಾ ಕಲೆಕ್ಷನ್” ಮಳಿಗೆ ಮೊತ್ತ ಮೊದಲ ಬಾರಿಗೆ ಸಂತಸದ ಸುದ್ದಿಯೊಂದನ್ನು ಗ್ರಾಹಕರಿಗೆ ತಂದಿಟ್ಟಿದೆ.
ಇಲ್ಲಿ ಬರೀ ಬುರ್ಖಾ ಮಾತ್ರ ಲಭ್ಯವಿದೆಯಲ್ಲ ಎಂಬ ಚಿಂತನೆ ನಿಮಗೆ ಮೂಡುತ್ತಿದೆಯೇ? ಗೊಂದಲ ಬಿಟ್ಟು ಬಿಡಿ ದೊಡ್ಡ ದೊಡ್ಡ ಮಾಲ್ ಗಳಲ್ಲಿ ಕಾಣ ಸಿಗುವ ಹೊಸ ಹೊಸ ಆಧುನಿಕ ಮನಮೋಹಕ ವಿನ್ಯಾಸದ ಉಡುಪುಗಳು ಇಲ್ಲಿವೆ. ಒಮ್ಮೆ ಭೇಟಿ ಇತ್ತು ಕಣ್ತುಂಬಿಸಿಕೊಳ್ಳಿ.
ಪುರುಷರಿಗೇನಿದೆ?: ಜೀನ್ಸ್ ಪ್ಯಾಂಟ್, ಶರ್ಟ್-ಟೀಶರ್ಟ್, ಹೈದರಾಬಾದ್ ಕುರ್ತಾ, ಗುಜರಾತಿ ಕುರ್ತಾ, ಕೇರಳೀಯನ್ಸ್ ಪೈಜಾಮ್, ಪಂಚೆ, ಶೆರ್ವಾನಿ ಹೀಗೆ ನಾನಾ ರೀತಿಯ ಪುರುಷರ ಉಡುಪು ಮಳಿಗೆಗೆ ಇದೇ ಮೊದಲ ಬಾರಿಗೆ ಲಗ್ಗೆ ಇಟ್ಟಿದೆ.
ಮಹಿಳೆಯರಿಗೇನಿದೆ?: ಬೆಲ್ ಕಟ್, ಲವಂಗಾ, ಲಾಂಗ್ ಟಾಪ್, ಸಂದೂರಿ ಬನಾರಸ್, ಕಾಟನ್, ನೆಟ್ಟೆಡ್ ಬನಾರಸ್, ಜೈಪುರ ಕಾಟನ್, ಶಿಫಾನ್ ಜಾರ್ಜೆಟ್, ರೆಡಿಮೆಡ್ ಕಾಟನ್ ಚೂಡಿದಾರ್ , ಲೆಗ್ಗೀನ್ಸ್ ಪ್ಯಾಂಟ್ ಹಾಗೂ ಸೀರೆ ಮುಂತಾದ ಗುಣಮಟ್ಟದ ಮಹಿಳಾ ಬಟ್ಟೆಗಳು ಲಭ್ಯವಿದೆ.
ಮೈಯ್ಯತ್ ಪರಿಪಾಲನೆ ವಸ್ತ್ರ, ವ್ಯಾನಿಟಿ ಬ್ಯಾಗ್, ಹ್ಯಾಂಡ್ ಬ್ಯಾಗ್, ಖಾಬ್, ವಿನ್ಯಾಸ ರೂಪದ ಬುರ್ಖಾ, ಬಳೆ, ಮೆಹಂದಿ (ಗೋರಂಟಿ), ಸುರುಮಾ, ಕಾಜಲ್ (ಕಾಡಿಗೆ), ಮಿಂಚು, ಸೆಂದಲ್ (ಸುಗಂಧ ದ್ರವ್ಯ), ಬಟ್ಟೆಗೆ ಹಾಕಿಕೊಳ್ಳುವ ಅತ್ತರ್ (ದ್ರವ್ಯ), ಗಂಡು ಮಕ್ಕಳಿಗೆ ಟೋಪಿ, ಪಾದರಕ್ಷೆ ಲಭ್ಯವಿದೆ. ಅಲ್ಲದೆ, ವಿದ್ಯಾರ್ಥಿಗಳ ಶಾಲಾ ಚೀಲ ಕಡಿಮೆ ದರದಲ್ಲಿ ಲಭ್ಯವಿದೆ.
ಬಟ್ಟೆಗಳ ಬಾಳಿಕೆ, ಗುಣಮಟ್ಟ, ಬೆಲೆ ಒಂದು ಅಂಗಡಿಯಿಂದ ಮತ್ತೊಂದು ಅಂಗಡಿಗೆ ಭಿನ್ನವಾಗಿರುತ್ತದೆ. ಶಾಪಿಂಗ್ ಮಾಡುವುದರಲ್ಲಿ ಎಷ್ಟೇ ಜಾಣರಾಗಿದ್ದರೂ ಕೆಲವು ಸಲ ಮೋಸ ಹೋಗುವುದು ಇದ್ದದ್ದೇ. ಆದರೆ ಪರಿಚಯಸ್ಥ, ಗ್ರಾಮಸ್ಥರ ನಂಬಿಕೆಗೆ ಅರ್ಹರಾಗಿರುವ ಇಲ್ಲಿನ ಮಳಿಗೆಯಲ್ಲಿ ಶಾಪಿಂಗ್ ನಡೆಸುವುದು ಉತ್ತಮ.
ಈ ಬಾರಿಯ ಕಲೆಕ್ಷನ್ ನಲ್ಲಿ ಮಕ್ಕಳಿಗೆ ಎಲ್ಲಾ ತರಹದ ಉಡುಪುಗಳಿದ್ದು, ಕೊಂಡುಕೊಳ್ಳುವ ಎಲ್ಲಾ ಬಟ್ಟೆಗಳ ಮೇಲೆ ಕಡಿಮೆ ದರದಲ್ಲಿ ನೀಡಲಾಗುವುದು. ಬಟ್ಟೆಗಳ ಬಾಳಿಕೆ, ಗುಣಮಟ್ಟ ಕಾಯ್ದುಕೊಳ್ಳುವ ಸಲುವಾಗಿ ಅಂತಾರಾಜ್ಯದಿಂದ ತರಿಸಲಾಗಿದೆ.
-ಅನ್ವರ್ ಗೋಳಿಪಡ್ಪು, ಮಳಿಗೆ ಮಾಲಕ

















