7

ಬಡಗಬೆಳ್ಳೂರು: ಬಿಜೆಪಿ ಪಂಚಾಯತ್ ಸಮಿತಿ ವತಿಯಿಂದ ನೂತನ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಹಾಗೂ ಮತದಾರರಿಗೆ ಆಯೋಜಿಸಿದ್ದ ಅಭಿನಂದನಾ ಸಭೆ ರವಿವಾರ ಇಲ್ಲಿನ ಶ್ರೀ ಆದಿಶಕ್ತಿ ಚಾಂಮುಡೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಅಭಿನಂದನೆ ಸ್ವೀಕರಿಸಿ ಬಳಿಕ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್, ಕಾರ್ಯಕರ್ತರು ಹಗಲಿರುಳು ಶ್ರಮಿಸಿದ ಫಲವಾಗಿ ನಾನು ಬಂಟ್ವಾಳದಲ್ಲಿ ಶಾಸಕನಾಗಿ ಆಯ್ಕೆಯಾಗಲು ಸಾಧ್ಯವಾಯಿತು. ನಿಮ್ಮ ಶ್ರಮಕ್ಕೆ ಪ್ರತೀಕಾರ ತೀರಿಸುವ ಸಲುವಾಗಿ ಹಿರಿಯರ ಮಾರ್ಗದರ್ಶನ ಪಡೆದು ಪ್ರಾಮಾಣಿಕವಾಗಿ ಈ ಕ್ಷೇತ್ರವನ್ನು ಅಭಿವೃದ್ಧಿಪಡಿಸುತ್ತೇನೆ ಎಂದು ಭರವಸೆ ನೀಡಿದರು.

ಈ ಕ್ಷೇತ್ರದಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವಾಗಿದ್ದು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಈ ಗೆಲುವು ನಾಂದಿಯಾಗಲಿದೆ ಎಂದ ಅವರು, ವ್ಯಾಪ್ತಿಯಲ್ಲಿ ಯಾವುದೇ ಸಮಸ್ಯೆಗಳಿದ್ದರು ನೇರವಾಗಿ ನನ್ನ ಗಮನಕ್ಕೆ ತಿಳಿಸಿ. ಸರಕಾರದ ಪರಿಹಾರಕ್ಕೆ ಪ್ರಯತ್ನಪಡುತ್ತೇನೆ ಎಂದು ತಿಳಿಸಿದರು.

ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಮಾತನಾಡಿ, ರಾಜೇಶ್ ನಾಯ್ಕ್ ಅವರು ಕೇತ್ರದಲ್ಲಿ ನಿರಂತರ ಪ್ರವಾಸ ಹಾಗೂ ಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸಿದ ಫಲವಾಗಿ ಗೆಲುವು ಸಾಧ್ಯವಾಯಿತು ಎಂದರು.

ಕ್ಷೇತ್ರದ ಅಭಿವೃದ್ಧಿಯಲ್ಲಿ ಕಾರ್ಯಕರ್ತರಿಗೆ ಬಹುದೊಡ್ಡ ಜವಾಬ್ದಾರಿ ಇದೆ. ಅದಕ್ಕಾಗಿ ಶಾಸಕರ ಎಲ್ಲಾ ಕೆಲಸ-ಕಾರ್ಯಗಳಲ್ಲಿ ಜತೆಯಲ್ಲಿದ್ದು, ಬೆಂಬಲ ನೀಡಲು ಕಾರ್ಯಕರ್ತರಿಗೆ ಸೂಚನೆ ನೀಡಿದರು.

ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ರಾಜ್ಯದಲ್ಲಿ ನಡೆದ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ  ಗೆಲುವು ಸಾಧಿಸಿದೆ. ಆದರೆ ಅಧಿಕಾರದ ದಾಹ ತೀರಿಸಲು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರಚಿಸಿ ಜನತೆಗೆ ವಂಚಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಮಾನಾಥ ರೈ ಅವರು ಶಾಸಕ, ಸಚಿವರಾಗಿದ್ದು ಭೂ ಮಾಫಿಯಾ, ಡ್ರಗ್ ಮಾಫಿಯಾಗಳಿಗೆ ಮಾತ್ರ. ಕ್ಷೇತ್ರದ ಜನತೆಗೆ ಅಲ್ಲಎಂದು ವ್ಯಂಗ್ಯವಾಡಿದರು.

ಚರ್ಚ್ ನ ಕೆಲ ಬಿಷಪ್ ಗಳು ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದು, ರಾಹುಲ್ ಗಾಂಧಿಯನ್ನು ಪ್ರಧಾನಿಯಾಗಿಸಲು ಪ್ರಯತ್ನ ಪಡುತ್ತಿದ್ದಾರೆ. ಆದರೆ ಇದು 2019ರಲ್ಲಿ ಫಲಿಸಲ್ಲ. ದೇಶದಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂದು ಭವಿಷ್ಯ ನುಡಿದರು.

ಈ ವೇಳೆ ಶಾಸಕ ರಾಜೇಶ್ ನಾಯ್ಕ್ ಅವರು ಬಿಜೆಪಿಯ ಹಿರಿಯ ಸಂಘಟಕರಾದ ನಡ್ಯೋಡಿ ಉಮಾನಾಥ ರೈ ಅವರನ್ನು ಸನ್ಮಾನಿಸಿದರು ಹಾಗೂ ಶ್ರೀ ಆದಿಶಕ್ತಿ  ದೇವಸ್ಥಾನಕ್ಕೆ ಮುಗ್ರೋಡಿ ಕನ್ಸ್ಟ್ರಕ್ಸನ್ ಮಾಲಕ  ಸುಧಾಕರ ಶೆಟ್ಟಿ  ಕೊಡುಗೆಯಾಗಿದ್ದ ನೀಡಿದ್ದ ಕುಡಿಯುವ ನೀರಿನ ವ್ಯವಸ್ಥೆಗೆ ಚಾಲನೆ ನೀಡಿದರು.03

 

002ಕಾರ್ಯಕ್ರಮದಲ್ಲಿ ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಿಜೆಪಿ ಹಿರಿಯ ಸಂಘಟಕ ಉಮನಾಥ್ ರೈ, ವಕೀಲ ಪ್ರಸಾದ್ ಕುಮಾರ್ ರೈ, ಬಂಟ್ವಾಳ ಬಿಜೆಪಿ ಕಾರ್ಯದರ್ಶಿ ರಾಮ್ ದಾಸ್ ಬಂಟ್ವಾಳ, ಕ್ಷೇತ್ರದ ಉಪಾಧ್ಯಕ್ಷ ದೇವಪ್ಪ ಪೂಜಾರಿ, ಪಂಚಾಯತ್ ಸಮಿತಿ ಅಧ್ಯಕ್ಷ ಜನಾರ್ದನ ಕೊಟ್ಟಾರಿ, ಬಡಗಬೆಳ್ಳೂರು ಪ್ರಭಾರಿ ಆನಂದ ಶಂಭೂರು, ರೈತ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ, ಬೆಳ್ಳೂರು ಸಹಕಾರಿ ಬ್ಯಾಂಕ್ ಅಧ್ಯಕ್ಷ ನಂದರಾಮ್ ರೈ, ಕೃಷಿಕ ಉಮೇಶ್ ಶೆಟ್ಟಿ ಪಂಜಿಮೊಗರು, ಜಿಲ್ಲಾ ಕಾರ್ಯಾಕಾರಿ ಸಮಿತಿ ಸದಸ್ಯ ಉಸ್ಮಾನ್ ಧನುಪೂಜೆ, ಕ್ಷೇತ್ರಾಧಿಕಾರಿ ಸಂದೀಪ್ ಬೆಳ್ಳೂರು, ಸಜೀಪ ಮನ್ನೂರು ಶಕ್ತಿ ಕೃಂದ್ರ ಅಧ್ಯಕ್ಷ  ಅರವಿಂದ್ ಭಟ್, ಕ್ಷೇತ್ರದ ಕಾರ್ಯದರ್ಶಿ ರಾಮನಾಥ ರೈ, ಕುಂದಾಪುರ ಕ್ಷೇತ್ರದ ವಿಸ್ತಾರಕ ಪ್ರಕಾಶ್ ಬೆಳ್ಳೂರು, ಜಿಲ್ಲಾ ಕಾರ್ಯಾಕಾರಿಣಿ ಸದಸ್ಯೆ ವೇದಾವತಿ, ಪ್ರಧಾನ ಕಾರ್ಯಾದರ್ಶಿ ತಿರುಲೇಶ್, ಗ್ರಾ.ಪಂ. ಸದಸ್ಯೆ ರೂಪ, ಬೂತ್ ಸಮಿತಿ ಅಧ್ಯಕ್ಷರಾದ ಚಿದಾನಂದ, ಶ್ರೀನಿವಾಸ, ಪ್ರವೀಣ್, ಉದಯ, ಲೋಕನಾಥ ಕಮ್ಮಾಜೆ  ಮತ್ತಿತರರು ಉಪಸ್ಥಿತರಿದ್ದರು.001

ಕ್ಷೇತ್ರ ರೈತ ಮೋರ್ಚಾ ಉಪಾಧ್ಯಕ್ಷ ರಮೇಶ್ .ಎಸ್ ಭಟ್ಟಾಜೆ ಸ್ವಾಗತಿಸಿ, ಬಡಗಬೆಳ್ಳೂರು ಬಿಜೆಪಿ ಪಂಚಾಯತ್ ಸಮಿತಿ ಅಧ್ಯಕ್ಷ ಜನಾರ್ದನ ಕೊಟ್ಟಾರಿ ವಂದಿಸಿದರು. ಶಶಿ ಕಿರಣ್ ಬೆಳ್ಳೂರು ಕಾರ್ಯಕ್ರಮವನ್ನು ನಿರೂಪಿಸಿದು.

8

4

02

2 (6)

 

3 (2)

004

6 (2)

By suddi9

Leave a Reply

Your email address will not be published. Required fields are marked *