ಬಂಟ್ವಾಳ: ತೆಂಕಬೆಳ್ಳೂರು ನಾಗಶ್ರೀ ಮಿತ್ರ ವೃಂದ (ರೀ) ಕಮ್ಮಾಜೆ ಹಾಗೂ ನಾಗಶ್ರೀ ಮಾತೃ ವೃಂದ ಕಮ್ಮಾಜೆ ಇದರ ಜಂಟಿ ಆಶ್ರಯದಲ್ಲಿ 22-07-2018ರಂದು ಧನೂಪೂಜೆ ವಿವೇಕ ಭವನದಲ್ಲಿ ವನಮಹೋತ್ಸವ ಹಾಗೂ ಸಸಿ ವಿತರಣಾ ಕಾರ್ಯಕ್ರಮ ನೇರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೆಂಕಬೆಳ್ಳೂರಿನ ಅ.ಹಿ.ಪ್ರಾ ಶಾಲೆಯ ನಿವೃತ್ತ ಮುಖೋಪಾಧ್ಯಾರದ ಶ್ರೀ ಅನಂತ್ ರಾಮ್ ಹೇರಳ ಇವರು ವಹಿಸಿಕೊಂಡರು. ಹಾಗೂ ವೆದೀಕೆಯಲ್ಲಿ ನಾಗಶ್ರೀ ಮಿತ್ರ ವೃಂದ (ರೀ) ಕಮ್ಮಾಜೆ ಇದರ ಕಟ್ಟಡಕ್ಕೆ ಸ್ಥಳದಾನಿಗಳಾದ ಶ್ರೀ ಶಶಿಧರ ಪೊಯ್ಯ, ಸಂಘದ ಅಧ್ಯಕ್ಷರಾದ ಶ್ರೀ ರಾಮಚಂದ್ರ ವರಕೋಡಿ, ವೃತ್ತಿಯಲ್ಲಿ ವಕೀಲೆ ಹಾಗೂ ನಾಗಶ್ರೀ ಮಾತೃ ವೃಂದದ ಅಧ್ಯಕ್ಷೆ ಶ್ರೀಮತಿ ತೀರ್ಥ ಎಸ್. ಕಮ್ಮಾಜೆ, ಬಂಟ್ವಾಳ ತಾಲೂಕು ಬಿ.ಜೆ.ಪಿ ಅಲ್ಪಸಂಖ್ಯಾತ ಯುವ ಮೋರ್ಚದ ಕಾರ್ಯದರ್ಶಿ ಉಸ್ಮಾನ್ ಡಿ. ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉದ್ದೇಸಿಸಿ ಮಾತನಾಡಿದ ಅನಂತ್ ರಾಮ್ ಹೇರಳರು ಕೃಷಿ ಹಾಗೂ ಪರಿಸರ ಸಂರಕ್ಷಣೆಯ ಬಗ್ಗೆ ಜನರಿಗೆ ಮಾಹಿತಿ ನೀಡಿದರು. ಸಂಘದ ಕಾರ್ಯದರ್ಶಿ ಪುಷ್ಪರಾಜ್ ಕಮ್ಮಾಜೆ, ಪ್ರಮೊದ್ ಕಮ್ಮಾಜೆ ಸಸಿವಿತರಿಸಿದರಿದರು. ತಿರುಮಲೇಶ್ ಬೆಳ್ಳೂರು ಕಾರ್ಯಕ್ರಮ ನಿರ್ವಹಿಸಿ. ಸಂಧ್ಯಾ ಶಿವಪ್ರಶಾದ್ ವಂದಿಸಿದರು.









