ಗುರುಪುರ : ಗುರುಪುರ ಬಂಟರ ಮಾತೃ ಸಂಘ ಇದರ ವಾರ್ಷಿಕ ಸಮಾವೇಶ, ಮಹಾಸಭೆ, ಸಮಾಜದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಅಭಿನಂದನಾ ಸಮಾರಂಭ ಜುಲೈ 29ರಂದು ಬೆಳಿಗ್ಗೆ ಗುರುಪುರ ಕುಕ್ಕುದಕಟ್ಟೆಯ ಶ್ರೀ ವೈದ್ಯನಾಥ ಕಲ್ಯಾಣ ಸಮುದಾಯ ಭವನದಲ್ಲಿ ಜರುಗಲಿದೆ.gur-july-25-bunts

ಮಧ್ಯಾಹ್ನ 1,45ಕ್ಕೆ ಸಭಾ ಕಾರ್ಯಕ್ರಮ ಜರುಗಲಿದ್ದು, ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿ ಆಶೀರ್ವಚನ ನೀಡಲಿದ್ದಾರೆ. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ವಿದ್ಯಾರ್ಥಿಗಳನ್ನು ಹಾಗೂ ಬಂಟ್ಸ್ ವೆಲ್ಫೇರ್ ಟ್ರಸ್ಟಿನ ಅಧ್ಯಕ್ಷ ಸದಾನಂದ ಶೆಟ್ಟಿ ಸಮಾಜದ ಸಾಧಕರನ್ನು ಸನ್ಮಾನಿಸಲಿದ್ದಾರೆ. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಹರೀಶ್ ಶೆಟ್ಟಿ ಐಕಳ `ಪಂಚಮ’ ಸವಿನೆನಪು ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ. ಶಾಸಕರಾದ ಡಾ. ಭರತ್ ಶೆಟ್ಟಿ, ರಾಜೇಶ್ ನಾಯಕ್ ಹಾಗೂ ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೇಟ್ಟಿ ಉಪಸ್ಥಿತಲಿರುವರು. ಗುರುಪುರ ಬಂಟರ ಮಾತೃ ಸಂಘದ ಅಧ್ಯಕ್ಷ ರಾಜಕುಮಾರ ಶೆಟ್ಟಿ ತಿರುವೈಲುಗುತ್ತು ಅಧ್ಯಕ್ಷತೆ ವಹಿಸುವರು. ರವಿರಾಜ್ ಶೆಟ್ಟಿ, ಮಂಜುನಾಥ ಭಂಡಾರಿ, ಶಶಿಧರ ಹೆಗ್ಡೆ, ಗಿರೀಶ್ ಶೆಟ್ಟಿ, ಭಾಸ್ಕರ ಶೆಟ್ಟಿ, ವಿಜಯಪ್ರಸಾದ್ ಆಳ್ವ, ಜಯರಾಮ ಸಂತ, ದೇವಿಚರಣ್ ಶೆಟ್ಟಿ, ರವೀಂದ್ರನಾಥ ಮಾರ್ಲ, ಉಮೇಶ್ ರೈ, ಪದ್ಮನಾಭ ಆಳ್ವ, ರಾಜಗೋಪಾಲ್ ರೈ, ಪ್ರವೀಣ್ ಶೆಟ್ಟಿ, ವಿನಯಕುಮಾರ್ ಶೆಟ್ಟಿ, ಗಿರೀಶ್ ಆಳ್ವ ಮಖ್ಯ ಅತಿಥಿಗಳಾಗಿರುವವರು. ಸುಬ್ಬಯ್ಯ ಶೆಟ್ಟಿ(ಸಮಾಜ ಸೇವೆ), ಆಶ್ವಿನ್ ನಾೈಕ್(ಕ್ರೀಡೆ), ರಾಜೇಂದ್ರ ಮೇಂಡ(ಕೃಷಿ) ವಿಜಯಲಕ್ಷ್ಮೀ ಶೆಟ್ಟಿ(ರಾಜಕೀಯ), ಸುರೇಂದ್ರ ಮಲ್ಲಿ(ಯಕ್ಷಗಾನ), ರಕ್ಷಿತ್ ಶೆಟ್ಟಿ(ಕ್ರೀಡೆ) ಮತ್ತು ಗಣೇಶ್ ಶೆಟ್ಟಿ(ಶ್ರಮಿಕ) ಸಂಘದಿಂದ ಸನ್ಮಾನಗೊಳ್ಳಲಿದ್ದಾರೆ.

ಬೆಳಿಗ್ಗೆ 11ರಿಂದ ಸಂಘದ ಯುವ ಘಟಕ ಸದಸ್ಯರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ, 12ರಿಂದ ಚರ್ಚಾಗೋಷ್ಠಿ ಜರುಗಲಿದೆ. ಇದರಲ್ಲಿ ನವನೀತ್ ಶೆಟ್ಟಿ ಕದ್ರಿ, ಗಣನಾಥ ಶೆಟ್ಟಿ ಎಕ್ಕಾರು, ಡಾ. ಸಾಯಿಗೀತಾ ಶೆಟ್ಟಿ, ಸತೀಶ್ ಅಡಪ ಪಾಲ್ಗೊಳ್ಳಲಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *