ಬಂಟ್ವಾಳ: ಇಲ್ಲಿನ ಸಜೀಪಮುನ್ನೂರು ಗ್ರಾಮ ಪಂಚಾಯತಿನಲ್ಲಿ ಆ.8ರಂದು ಸ್ವಚ್ಚತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸ್ವಚ್ಚತಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತ್ತು.

ಜಾಥಾದಲ್ಲಿ ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಶರೀಫ್ ನಂದಾವರ ,ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ನಸೀಮಾ ಬೇಗಂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್, ಸದಸ್ಯರಾದ ಜನಾರ್ಧನ , ಮಜೀದ್, ಹಂಝ, ಇದ್ದಿನಬ್ಬ, ನವೀನ್ , ಸುಮತಿ.ಎಸ್, ನರೇಂದ್ರ ಆಳ್ವ, ಯೂಸುಫ್ ಕರಂದಾಡಿ, ವನಜ, ಪ್ರಮೀಳಾ , ದುಲ್ಸನ್‍ಪೆರಾವೋ, ಅಹ್ಮದ್ ಕಬೀರ್, ಪಂಚಾಯತ್ ಕಾರ್ಯದರ್ಶಿ ಶಿವಗೊಂಡಪ್ಪ, ಪಂಚಾಯತ್ ಸಿಬ್ಬಂದಿವರ್ಗ, ನಂದಾವರ ಶಾಲಾ ಶಿಕ್ಷಕರಾದ , ಉದಯ, ದೇವದಾಸ, ಸರಸ್ವತಿ ಶಾಲಾ ವಿದ್ಯಾರ್ಥಿಗಳು, ಅಂಗನವಾಡಿ ಶಿಕ್ಷಕಿಯರು, ಆಶಾ ಕಾರ್ಯಕರ್ತೆಯರು, ಊರಿನ ನಾಗರೀಕರು ಭಾಗವಹಿಸಿದರು.