ಬಂಟ್ವಾಳ: ಪುದು ಗ್ರಾಮದ ಸುಜೀರ್ ಸರಕಾರಿ ಪ್ರೌಢ ಶಾಲೆಯಲ್ಲಿ ತಾಲ್ಲೂಕು ಮಟ್ಟದ ಚದುರಂಗ ಆಟ “ಚೆಸ್ ಗೇಮ್ “ವನ್ನು ಈ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಎಫ್ ಉಮ್ಮರ್ ಫಾರೂಕ್ ಫರಂಗಿಪೇಟೆ ರವರು ಚೆಸ್ ಆಡುದರ ಮೂಲಕ ಆಟಕ್ಕೆ ಆ.8ರಂದು ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಚೆಸ್ ಆಟವನ್ನು ಬುದ್ಧಿಶಕ್ತಿ ವಿನಿಯೋಗದ ಆಟ ಎನ್ನಲಾಗುತ್ತದೆ. ಇದು ಅದೃಷ್ಟವನ್ನು ಅವಲಂಬಿಸಿದ ಆಟವಲ್ಲ. ಮೆದುಳಿಗೆ ನೀಡುವ ಕಸರತ್ತು. ಯೋಜನಾ ಸಾಮರ್ಥ್ಯ ಹಾಗೂ ಮುಂದೆ ಎದುರಾಗುವ ಸವಾಲುಗಳನ್ನು ನಿಭಾಯಿಸುವ ಮುಂದಾಲೋಚನೆಯೂ ಅಗತ್ಯ. ಚೆಸ್ ಬರಿ ಆಟವಲ್ಲ ಕುಶಲ ಕಲೆ ಹಾಗೂ ವಿಜ್ಞಾನವೂ ಹೌದು. ಮಾನಸಿಕ ವ್ಯಾಯಾಮವೂ ಹೌದು. ಮನರಂಜನೆಗಾಗಿ ಮಾತ್ರವಲ್ಲ ಸ್ವರ್ದಾತ್ಮಕ ಕ್ರೀಡೆಯಾಗಿಯೂ ಜನಪ್ರಿಯ. ವಿದ್ಯಾರ್ಥಿಗಳು ಪ಼ಠ್ಯ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗದೆ ಕ್ರೀಡಾ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಫರಂಗಿಪೇಟೆ ಕೇಂದ್ರ ಜುಮ್ಮಾ ಮಸೀದಿಯ ಅಧ್ಯಕ್ಷ ಮಹಮ್ಮದ್ ಬಾವ, ಪುದು ಗ್ರಾಮ ಪಂಚಾಯತ್ ಸದಸ್ಯೆ ಸುಜಾತ, ಟುಡೇ ಫೌಂಡೇಶನ್ ಸದಸ್ಯ ಮಜೀದ್ ಫರಂಗಿಪೇಟೆ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ಝುಬೇರ್ ಸುಜೀರ್, ಶ್ರೀಮತಿ ಇಂದಿರಾ, ಶಾಲಾ ಮುಖ್ಯೋಪಾಧ್ಯಾಯಣಿ ಶ್ರೀಮಾತಿ ಶಶಿಮಂಗಳ ವೈ ಹಾಗೂ ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕ ಜಯಪ್ರಕಾಶ್ ರವರು ಸ್ವಾಗತಿಸಿದರು. ಮಹಮ್ಮದ್ ಬಿ ತುಂಬೆ ನಿರೂಪಿಸಿದರು.
