ಮೂಡುಬಿದಿರೆ : ಹಸಿರು ಕರ್ನಾಟಕ ಆಂದೋಲನದ ಅಂಗವಾಗಿ ಮೂಡುಬಿದಿರೆ ಅರಣ್ಯ ಇಲಾಖೆಯ ವತಿಯಿಂದ ಶಿರ್ತಾಡಿ ಗ್ರಾ.ಪಂ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಗ್ರಾ.ಪಂ ವಠಾರದಲ್ಲಿ ಶನಿವಾರ ಗಿಡಗಳನ್ನು ನೆಡಲಾಯಿತು.

hasiru

ಪಂಚಾಯತ್ ಅಧ್ಯಕ್ಷೆ ಲತಾ ಹೆಗ್ಡೆ ಗಿಡವನ್ನು ನೆಟ್ಟು ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ರಾಜೇಶ್ ಸುವರ್ಣ, ಎಪಿಎಂಸಿ ಸದಸ್ಯ ಪ್ರವೀಣ್ ಕುಮಾರ್, ಪಂಚಾಯತ್ ಸದಸ್ಯ ಯಶೋಧರ, ವೈದ್ಯಾಧಿಕಾರಿ ಡಾ/ನಸೀಬಾ, ಶಿರ್ತಾಡಿ ಘಟಕದ ಉಪವಲಯಾರಣ್ಯಾಧಿಕಾರಿ ಚಂದ್ರಕಾಂತ ವಿ.ಪೋಳ್, ಪಂಚಾಯತ್ ಕಾರ್ಯದರ್ಶಿ ರವಿ, ಅರಣ್ಯ ರಕ್ಷಕರಾದ ಬಸವರಾಜ್, ರಮೇಶ್ ನಾಯ್ಕ್, ಗ್ರಾಮಕರಣಿಕೆ ಉಷಾ, ಪಂಚಾಯತ್ ಸಿಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *