ಮೂಡುಬಿದಿರೆ: ಕಲ್ಲಬೆಟ್ಟು ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪದವಿ ಪೂರ್ವ ವಾಣಿಜ್ಯ ವಿದ್ಯಾರ್ಥಿಗಳು ಬೆಳ್ತಂಗಡಿಯ ಹಂಸಗಿರಿ ಅಕ್ಕಿ ಕಾರ್ಖಾನೆ, ಪುತ್ತೂರಿನÀ ಎಸ್.ಜಿ. ಗ್ರೂಪ್, ಎಸ್. ಆರ್. ಕೆ. ಲಾಡರ್, ಹಾಗೂ ಮಾಸ್ಟರ್ ಪ್ಲಾನರಿ ಕೋನ್ಕುಡ್ ಇಂಡಸ್ಟ್ರೀಸ್ ಇಲ್ಲಿಗೆ ಅಧ್ಯಯನ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಅಕ್ಕಿ ಕಾರ್ಖಾನೆಯ ಬಾಲಕೃಷ್ಣನಾಯಕ್, ಸುಜಾತ, ಎಸ್ ಜಿ ಗ್ರೂಪ್ನ ಸತೀಶ್, ಸುರೇಶ್, ಎಸ್ ಆರ್ ಕೆ ಲಾಡರ್ನ ಆನಂದ್ ಹಾಗೂ ಮಾಸ್ಸರ್ ಫ್ಲಾನರಿಯ ಶಂಕರ್, ಗೌರಿ ಇವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾಲೇಜಿನ ವಿಭಾಗ ಮುಖ್ಯಸ್ಥ, ಪ್ರಶಾಂತ್ ಶೆಟ್ಟಿ, ಉಪನ್ಯಾಸಕಿ ಪ್ರೀತಿಕಾ ಜೈನ್ ಉಪಸ್ಥಿತರಿದ್ದರು.

