ಮೂಡುಬಿದಿರೆ: ಮೂಡುಬಿದಿರೆಯ ಸಮಗ್ರ ಸಂಪರ್ಕ ಮಾಹಿತಿ, ಉಪಯುಕ್ತ ವಿವರಗಳನ್ನೊಳಗೊಂಡ ಕನೆಕ್ಟ್ ಮೂಡುಬಿದಿರೆ ಡೈರೆಕ್ಟರಿ, ಆಂಡ್ರಾಯ್ಡ್ ಆ್ಯಪ್ ಇದರ ಲೋಕಾರ್ಪಣೆ ಸಮಾರಂಭ ಅ12ರ ಸಂಜೆ 4ರಿಂದ ಸಾವಿರ ಕಂಬದ ಬಸದಿಯ ಆವರಣದಲ್ಲಿ ನಡೆಯಲಿದೆ. ಶ್ರೀ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಕನೆಕ್ಟ್ ಮೂಡುಬಿದಿರೆ ಡೈರೆಕ್ಟರಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಕನೆಕ್ಟ್ ಮೂಡುಬಿದಿರೆ ಆಂಡ್ರಾಯ್ಡ್ ಆ್ಯಪ್ ಲೋಕಾರ್ಪಣೆ ನೆರವೇರಿಸಲಿದ್ದಾರೆ.

Connect Moodubidire
ಈ ಕಾರ್ಯಕ್ರಮದಲ್ಲಿ ಎಂ, ಲಯನ್ಸ್ ಜಿಲ್ಲಾ 2ನೇ ಉಪರಾಜ್ಯಪಾಲ ಡಾ.ಗೀತಪ್ರಕಾಶ್, ಮೂಡುಬಿದಿರೆ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಕೆ. ನಿತ್ಯಾನಂದ ಶೆಟ್ಟಿ, ಜೇಸಿ ಅಧ್ಯಕ್ಷೆ ಸಂಗೀತಾ ಎಂ. ಪ್ರಭು, ರೋಟರಿ ಟೆಂಪಲ್ ಟೌನ್ ಅಧ್ಯಕ್ಷ ವಿನ್ಸೆಂಟ್ ಡಿ.ಕೋಸ್ತಾ, ರೋಟರಿ ಕ್ಲಬ್ ಅಧ್ಯಕ್ಷ ಡಾ.ರಮೇಶ್, ಪ್ರಭಾತ್ ಸಿಲ್ಕ್ಸ್‍ನ ಪ್ರಭಾತ್‍ಚಂದ್ರ ಜೈನ್, ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಅಂತಾರಾಷ್ಟ್ರೀಯ ಸೇವಾ ಸಂಸ್ಥೆಗಳಿಂದ ಸೇವಾ ಕಾರ್ಯಗಳೂ ಈ ಸಂದರ್ಭ ನಡೆಯಲಿವೆ ಎಂದು ಕನೆಕ್ಟ್ ಮೂಡುಬಿದಿರೆಯ ಪ್ರಧಾನ ಸಂಪಾದಕ ನವೀನ್ ಕುಮಾರ್ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *