ಬಂಟ್ವಾಳ: ಕೆಲಸಕ್ಕೆ ತೆರಳಿ ಪತ್ನಿ ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದಾರೆ ಎಂದು ಪತಿ ಬಂಟ್ವಾಳ ನಗರ ಠಾಣೆಯಲ್ಲಿ ದೂರು ನೀಡಿದ ಘಟನೆ ನಡೆದಿದೆ.
ಬಿಸಿರೋಡಿನ ಬಿ.ಮೂಡ ಗ್ರಾಮದ ಕೊಡಕಲ್ ನಿವಾಸಿ ನಾರಾಯಣ ಪೂಜಾರಿ ಅವರ ಪತ್ನಿ ಸವಿತಾ ( 37) ಅವರು ಕಾಣೆಯಾದ ಮಹಿಳೆ.
ಈ ದಂಪತಿಗಳಿಗೆ ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದು, ಮಕ್ಕಳಾಗಿರಲಿಲ್ಲ.

ಮನೆಯಲ್ಲಿ ಇಬ್ಬರು ಇಡ್ಲಿ ತಯಾರು ಮಾಡಿ ಮಾರಟ ಮಾಡುತ್ತಿದ್ದರು. ಅದರೆ ಎಂದಿನಂತೆ ಇಡ್ಲಿ ಮಾರಾಟ ಮಾಡಲೆಂದು ಪುತ್ತೂರಿಗೆ ಹೋಗುತ್ತೇನೆ ಎಂದು ಮನೆಯಿಂದ ಹೋದವರು ಮತ್ತೆ ವಾಪಾಸು ಬಂದಿಲ್ಲ.ಮನೆಯಿಂದ ಹೊರಟು ಹೋಗುವಾಗ ಆಧಾರ್ ಕಾರ್ಡು, ಸರ್ಟಿಫಿಕೇಟ್ ಹಾಗೂ ಬಟ್ಟೆಬರೆಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಠಾಣೆ ಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಇವರ ಬಗ್ಗೆ ಮಾಹಿತಿ ಸಿಕ್ಕವರು ಬಂಟ್ವಾಳ ನಗರ ಠಾಣೆಯಲ್ಲಿ ತಿಳಿಸುವಂತೆ ವಿನಂತಿ ಸಿದ್ದಾರೆ