ಬಂಟ್ವಾಳ : ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘ ಬೆಂಗಳೂರು ಜಿಲ್ಲಾ ಸಮಿತಿ ಮಂಗಳೂರು ಬಂಟ್ವಾಳ ಉಪಸಮಿತಿ ಇದರ ವಾರ್ಷಿಕ ಮಹಾಸಭೆಯು ಬಿ.ಸಿ.ರೋಡ್ ಹೋಟೇಲ್ ಚಿಕೋರಿ ಸಭಾಂಗಣದಲ್ಲಿ ನಡೆಯಿತು.
ಬಂಟ್ವಾಳ ಉಪಸಮಿತಿ ಅಧ್ಯಕ್ಷ ಪಿ.ಸುಬ್ರಹ್ಮಣ್ಯ ರಾವ್ ಅಧ್ಯಕ್ಷತೆ ವಹಿಸಿದ್ದರು.

MESCOM (2)
ಈ ಸಂದರ್ಭದಲ್ಲಿ ದ.ಕ.ಜಿಲ್ಲಾ ಸಮಿತಿ ಅಧ್ಯಕ್ಷ ಪಿ.ಶಿವಕುಮಾರ್ ಪೈಲೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಶಾಲ ಪೂಜಾರಿ, ಕೇಂದ್ರ ಸಮಿತಿ ಬೆಂಗಳೂರಿನ ಸುಂದರ ಗೌಡ ಎಚ್., ಮೆಸ್ಕಾಂ ಪ್ರತಿನಿಧಿ ಲಕ್ಷ್ಮಿನಾರಾಯಣ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಲಿಂಗಪ್ಪ ಕುಲಾಲ್, ಉಪಾಧ್ಯಕ್ಷ ಹಾಜಿ. ಇಬ್ರಾಹಿಂ, ಸಂಘಟನಾ ಕಾರ್ಯದರ್ಶಿ ಎ.ಎಚ್.ಅಬ್ದುಲ್ ಸಲಾಂ ಉಪಸ್ಥಿತರಿದ್ದರು.

MESCOM (1)
ಕಾರ್ಯಕಾರಿ ಸಮಿತಿ ಸದಸ್ಯ ಪದ್ಮನಾಭ ಮಯ್ಯ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಎನ್.ಎ.ಯೂಸುಫ್ ವಾರ್ಷಿ ವರದಿ ಮಂಡಿಸಿದರು. ಬಂಟ್ವಾಳ ಉಪಸಮಿತಿ ಕೋಶಾಧಿಕಾರಿ ಪರಮೇಶ್ವರ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಜತೆ ಕಾರ್ಯದರ್ಶಿ ಸ್ಟೇನಿ ಡಿ’ ಕುನ್ನ ವಂದಿಸಿದರು. ಇಬ್ರಾಹಿಂ ಆಶಾ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *