ಬಂಟ್ವಾಳ: ಕೆ.ಎಮ್.ಸಿ. ಆಸ್ಪತ್ರೆ, ಮಂಗಳೂರು ಇವರ ಸಹಯೋಗದೊಂದಿಗೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವು ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು.
ಅ.13ರಂದು ಶನಿವಾರ ಬಿ.ಸಿ.ರೋಡಿನ ನಗರ ಭಾಗದಲ್ಲಿ ಈ ಬೃಹತ್ ಆರೋಗ್ಯ ತಪಾಸಣಾ ಶಿಬಿರವು ಬಂಟ್ವಾಳ ತಾಲೂಕು ಕಾನೂನು ಸಲಹಾ ಸಮಿತಿ-ತಾಲೂಕು ವಕೀಲರ ಸಂಘ, ರೋಟರಿ ಕ್ಲಬ್ ಬಂಟ್ವಾಳ ಹಾಗೂ ಭಾರತೀಯ ಜೈನ್ ಮಿಲನ್, ಬಂಟ್ವಾಳ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜರಗಿತು.
ಈ ಬೃಹತ್ ಶಿಬಿರವನ್ನು ಜೆ.ಎಮ್.ಎಫ್.ಸಿ. ಬಂಟ್ವಾಳ ತಾಲೂಕು ನ್ಯಾಯಾಲಯದ ನ್ಯಾಯಾದೀಶರಾದ ಪ್ರತಿಭಾ ಡಿ. ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ಇಂದಿನ ಜನರಿಗೆ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಹಾಗೂ ಯಾವುದೇ ಖಾಯಿಲೆ ಬಾರದಂತೆ ಹೇಗೆ ತಡೆಗಟ್ಟಬೇಕು, ಎಂಬುದಕ್ಕಾಗಿ ಇಂತಹ ಶಿಬಿರಗಳು ಅತ್ಯವಶ್ಯಕ ಎಂದು ತಿಳಿಯಪಡಿಸಿದರು.

Jain Milan prgme (1)
ಶಿಬಿರದ ನೇತೃತ್ವ ವಹಿಸಿರುವ ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ಹಾಗೂ ವಕೀಲರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಇವರ ಗೌರವ ಉಪಸ್ಥಿತಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನಾ ಸಮಾರಂಭ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ ಜೈನ್ ಮಿಲನ್ ಬಂಟ್ವಾಳ ಶಾಖೆಯ ಅಧ್ಯಕ್ಷರಾದ ವೀರ್ ಬಿೃಜೇಶ್ ಜೈನ್ ಇವರು ವಹಿಸಿದ್ದು. ಬೃಹತ್ ಶಿಬಿರದ ಆಯೋಜನೆಯನ್ನು ಮುಖ್ಯವಾಗಿ ನಿರ್ವಹಿಸಿದರು.
ಮುಖ್ಯ ಅತಿಥಿಯಾಗಿ ಭಾರತೀಯ ಜೈನ್ ಮಿಲನ್ ವಲಯ 8 ರ ನಿರ್ದೇಶಕ ಸುದರ್ಶನ್ ಜೈನ್ ಹಾಗೂ ರೋಟರಿ ಡಿಸ್ಟ್ರಿಕ್ ಉಪ ಗವರ್ನರ್ ಪ್ರಕಾಶ್ ಕಾರಂತ್, ನರಿಕೊಂಬು ಇವರುಗಳು ಕಾರ್ಯಕ್ರಮಕ್ಕೆ ಶುಭಹಾರೈಸಿದರು.

Jain Milan prgme (2)
ಈ ಸಂದರ್ಭದಲ್ಲಿ ಬಂಟ್ವಾಳ ಜೈನ್ ಮಿಲನ್ ಕಾರ್ಯದರ್ಶಿ ವೀರಾಂಗನಾ ಗೀತಾ ಜಿನಚಂದ್ರ, ರೋಟರಿ ಕ್ಲಬ್ ಕಾರ್ಯದರ್ಶಿ ಹಾಗೂ ವಕೀಲರ ಸಂಘದ ಕಾರ್ಯದರ್ಶಿ ಆಶಾ ಡಿ. ರೈ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಕೀಲರಾದ ಸುರೇಶ್ ಕುಮಾರ್ ನಾವೂರು ಇವರು ಸ್ವಾಗತಿಸಿ, ಬಂಟ್ವಾಳ ಜಯನ್ ಮಿಲನ್ ಕಾರ್ಯದರ್ಶಿ ವೀರ್ ಡಾ| ಸುದೀಪ್ ಕುಮಾರ್ ಇವರು ವಂದಿಸಿದರು.

ಶಿಬಿರದಲ್ಲಿ 200 ಕ್ಕಿಂತಲೂ ಹೆಚ್ಚು ಜನರು ತಮ್ಮ ಆರೋಗ್ಯದ ಬಗ್ಗೆ ತಪಾಸಣೆಯನ್ನು ಮಾಡಿಕೊಂಡು, ಸೂಕ್ತ ಮಾರ್ಗದರ್ಶನ ಸಲಹೆ ಹಾಗೂ ಔಷಧಿಗಳನ್ನು ಪಡೆದುಕೊಂಡರು.

By suddi9

Leave a Reply

Your email address will not be published. Required fields are marked *