ಕೈಕಂಬ: ಮುಸ್ಲಿಮರ ಪವಿತ್ರ ಹಬ್ಬ ಈದ್ ಮಿಲಾದ್ ಹಬ್ಬ ಹಿಂದೂ-ಮುಸ್ಲಿಮರ ಭಾವೈಕ್ಯತೆಗೆ ನಾಂದಿ ಹಾಡಿದ್ದು, ನಾವೆಲ್ಲಾ ಒಂದೇ ಎನ್ನುವ ಸಂದೇಶವನ್ನು ಸಾರುವ ಮೂಲಕ ಹಬ್ಬದ ಸಂಭ್ರಮ ಕಳೆಗುಟ್ಟಿತ್ತು.
ಹೌದು ಕುಪ್ಪೆಪದವಿನ ನಾನಾ ಭಾಘಗಳಲ್ಲಿ ನಡೆದ ಈದ್ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಮುಸ್ಲಿಂ ಬಂಧುಗಳಿಗೆ ಹಿಂದೂ ಬಾಂಧವರು ಸಿಹಿ ಹಂಚಿ ಒಗ್ಗಟ್ಟಾಗಿ ಸಂಭ್ರಮವನ್ನು ಆಚರಿಸಿದ್ದಾರೆ. ಕುಪ್ಪೆಪದವು ಸಮೀಪದ ಕಲ್ಲಾಡಿಯ ಬದ್ರಿಯಾ ಹಿದಾಯತುಲ್ ಮದ್ರಸಾ ಬಾರ್ದಿಲ ಇದರ ಧಾರ್ಮಿಕ ಮೆರವಣಿಗೆ ಹೊರಟಿತ್ತು.
20vpeidmilad
ಈ ಮೆರವಣಿಗೆಯಲ್ಲಿ ನೂರಾರು ಮಂದಿ ಮುಸ್ಲಿಂ ಬಾಂಧವರು ಭಾಗವಹಿಸಿದ್ದರು. ಈ ವೇಳೆ ಕಲ್ಲಾಡಿಯಲ್ಲಿ ಹಿಂದೂ ಸೇವಾ ಸಮಿತಿ ಇದರ ಸದಸ್ಯರು ಸಿಹಿತಿಂಡಿ ವಿತರಿಸಿ ಭಾವೈಕ್ಯತೆಯ ಸಂದೇಶ ಸಾರಿದ್ದಾರೆ. ಇದೇ ರೀತಿ ಕುಪ್ಪೆಪದವಿನ ಬದ್ರಿಯಾ ಜುಮಾ ಮಸೀದಿಯ ಮದೀನತುಲ್ ಉಲುಂ ಮದ್ರಸಾ ಮೆರವಣಿಗೆಯಲ್ಲಿ ಸೇರಿದ್ದ ನೂರಾರು ಮಂದಿ ಮುಸ್ಲಿಂ ಬಂಧುಗಳಿಗೆ ಹಿಂದೂ ಸಂಘಟನೆಯ ಸದಸ್ಯರು ಸಿಹಿತಿಂಡಿ ಹಾಗೂ ತಂಪು ಪಾನೀಯ ವಿತರಿಸಿದ್ದಾರೆ.
ವಾಮಂಜೂರು, ಗುರುಪುರ ಕೈಕಂಬ,಻ಡ್ಮುಂಡೂರು ಬಡಕಬೈಲ್ ಕಡೆಗಳಲ್ಲಿ ಈದ್ ಮೆರವಣಿಗೆ ಹೊರಟಿದ್ದು, ಎಲ್ಲೆಲ್ಲೂ ಹಬ್ಬದ ಸಂಭ್ರಮ ಕಳೆಗುಟ್ಟಿತ್ತು.

By suddi9

Leave a Reply

Your email address will not be published. Required fields are marked *