ಮಾಣಿ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ‘ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ’ ಮತ್ತು ‘ಸಾರ್ವಜನಿಕ ಶಿಕ್ಷಣ ಇಲಾಖೆಯ’ ಸಹಯೋಗದಲ್ಲಿ ಗಾಂಧಿ 150 ರಂಗಪಯಣದ 150 ನೇ ರಂಗಪ್ರಯೋಗ – “ಪಾಪು ಬಾಪು” ಇದರ ಯಶಸ್ವಿ ಪ್ರದರ್ಶನವು ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು.
ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯುವ ಮೂಲಕ ಶಾಲಾ ಸಂಚಾಲಕ ಜೆ.ಪ್ರಹ್ಲಾದ್.ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಗಾಂಧೀಜಿಯವರ ಚಿಂತನೆಗಳನ್ನು ಪಸರಿಸುವ ದೃಷ್ಟಿಯಲ್ಲಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಡಾ| ಶ್ರೀಪಾದ ಭಟ್ ನಿರ್ದೇಶಿಸಿದ ಪ್ರಸ್ತುತ ನಾಟಕವು ಶ್ರೀ ಮಧ್ವರಾಜ್ ಹಾಗೂ ಅವರ ತಂಡದ ಪ್ರಬುದ್ಧ ಕಲಾವಿದರ ಅದ್ಭುತ ನಟನಾ ಚತುರತೆಯಲ್ಲಿ ಅಮೋಘವಾಗಿ ಮೂಡಿ ಬಂತು.
ರಂಗಪಯಣ ಮಂಗಳೂರು ವಿಭಾಗದ ಸಂಚಾಲಕರಾದ ಮೌನೇಶ್ ವಿಶ್ವಕರ್ಮ , ಬಾಲವಿಕಾಸ ಟ್ರಸ್ಟಿನ ಕಾರ್ಯದರ್ಶಿ ಕೊಂಬಿಲ ನಾರಾಯಣ ಶೆಟ್ಟಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮೀ .ವಿ.ಶೆಟ್ಟಿ , ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಗ್ರೇಸ್.ಪಿ.ಸಲ್ಡಾನಾ ಉಪಸ್ಥಿತರಿದ್ದರು.