ಬಂಟ್ವಾಳ: ಸಾಮಾಜಿಕ, ಸಾಂಸ್ಕøತಿಕ, ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಕಳೆದ 37 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪುಂಜಾಲಕಟ್ಟೆಯ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಮತ್ತು ಶ್ರೀ ಮುರುಘೇಂದ್ರ ವನಿತಾ ಸಮಾಜ ಇದರ ವತಿಯಿಂದ ತುಳು ಭಾಷೆ ಮತ್ತು ಸಂಸ್ಕøತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲೆ ಸೇರಿದಂತೆ ಅವಿಭಜಿತ ದ.ಕ.ಜಿಲ್ಲಾ ಮಟ್ಟದ ನಾಟಕ ಸ್ಪರ್ಧೆ ನಡೆಯಲಿದ್ದು ನಾಟಕ ಕೃತಿ ಮತ್ತು ತಂಡಗಳನ್ನು ಆಹ್ವಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಅವರು ತಿಳಿಸಿದ್ದಾರೆ.Punjalakatte
ಡಿ. 11ರಂದು ಸಂಜೆ ಮಿತ್ರ ಮಂಡಳಿ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು 2019 ಫೆ. 23ರಿಂದ ಮಾ. 2ರವರೆಗೆ ನಾಟಕ ಸ್ಪರ್ಧೆ ಏರ್ಪಡಿಸಲಾಗಿದ್ದು ಆಸಕ್ತ ತಂಡಗಳು ಡಿ. 31ರೊಳಗಾಗಿ ಕೃತಿ ಕಳುಹಿಸಿ ಕೊಡುವಂತೆ ಅವರು ಕೋರಿದ್ದಾರೆ.ಒಟ್ಟು 7 ನಾಟಕ ತಂಡಗಳನ್ನು ಸ್ಪರ್ಧೆಗೆ ಆಯ್ಕೆಗೊಳಿಸಲಾಗುತ್ತದೆ. ಈ ಮೊದಲು ನಾಟಕ ಸ್ಪರ್ಧೆಯಲ್ಲಿ ಪ್ರಶಸ್ತಿ ವಿಜೇತ ಕೃತಿಗಳಿಗೆ ಅವಕಾಶವಿಲ್ಲ. ವಿಜೇತ ತಂಡಗಳಿಗೆ ಪ್ರಥಮ 30,000 ರೂ., ದ್ವಿತೀಯ 20,000 ರೂ. ಮತ್ತು ತೃತೀಯ 15,000 ರೂ. ಮೊತ್ತದ ನಗದು ಬಹುಮಾನ ಮತ್ತು ಶಾಶ್ವತ ಫಲಕ ಹಾಗೂ ವೈಯಕ್ತಿಕ ಬಹುಮಾನ ನೀಡಲಾಗುತ್ತದೆ. ಆಯ್ಕೆಯಾದ ತಂಡಗಳಿಗೆ 5 ಸಾವಿರ ರೂ. ಪ್ರಯಾಣ ಭತ್ಯೆ ನೀಡಲಾಗುವುದು. ಆಸಕ್ತ ತಂಡಗಳು 5 ಸಾವಿರ ರೂ. ಠೇವಣಿಯೊಂದಿಗೆ ನಾಟಕ ಕೃತಿಗಳನ್ನು ಶ್ರೀ ಮುರುಘೇಂದ್ರ ಮಿತ್ರ ಮಂಡಳಿ, ಅಂಚೆ ಪುಂಜಾಲಕಟ್ಟೆ-574233 ವಿಳಾಸಕ್ಕೆ ಕಳುಹಿಸಿಕೊಡುವಂತೆ ವಿನಂತಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷ ಮೋಹನ್ ಸಾಲ್ಯಾನ್, ಕಾರ್ಯದರ್ಶಿ ಸಂತೋಷ್ ಮೂರ್ಜೆ, ಪದಾಧಿಕಾರಿಗಳಾದ ಕೆ.ವಿ. ರಾಜೇಂದ್ರ, ಕಾಂತಪ್ಪ ಟೈಲರ್, ಶ್ರೀ ಮುರುಘೇಂದ್ರ ವನಿತಾ ಸಮಾಜದ ಅಧ್ಯಕ್ಷೆ ಆಶಾ ದಿನಕರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *