ಸುದ್ದಿ9ಬಂಟ್ವಾಳ: ನಿಯಮಿತ ಪೌಷ್ಟಿಕ ಆಹಾರ ಮಗುವಿನ ಬೌದ್ದಿಕ ಶಾರೀರಿಕ ಬೆಳವಣಿಗೆಗೆ ಪೂರಕವಾಗಿರತ್ತದೆ. ಅಂತಹ ಆರೋಗ್ಯವಂತ ಮಗು ಸಾಧನಶೀಲರಾಗಲು ಸಾಧ್ಯ ಎಂದು ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಹೇಳಿದರು. ಅವರು ಬಾಳ್ತಿಲ ಗ್ರಾ.ಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಮತ್ತು ಬಾಳ್ತಿಲ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಬಾಳ್ತಿಲ ಸ್ತ್ರೀ ಶಕ್ತಿ ಗೊಂಚಲಗಳ ಆಶ್ರಯದಲ್ಲಿ ನಡೆದ ಪೌಷ್ಟಿಕ ಆಹಾರ ಸಪ್ತಾಹದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಮಗುವಿನ ಸಮರ್ಪಕ ಬೆಳವಣಿಗೆಗೆ ನಿಗದಿತ ಸಮಯಕ್ಕೆ ಪೌಷ್ಟಿಕ ಆಹಾರ ಪೂರೈಕೆ ಅಗತ್ಯ. ಆಹಾರಗಳನ್ನು ಸರಿಯಾದ ರೀತಿಯಲ್ಲಿ ಮಗುವಿಗೆ ನೀಡುವ ಕೆಲಸಗಳನ್ನು ಅಂಗನವಾಡಿಗಳು ಮಾಡುತ್ತಿವೆ ಎಂದರು. ಇದೇ ಸಂದರ್ಭ ಬಾಳ್ತಿಲ ಗ್ರಾ.ಪಂ.ನ ಅಂಗನವಾಡಿಗಳಿಗೆ ಸ್ಟೀಲ್ ಕಪಾಟುಗಳನ್ನು ನೀಡುವ ಭರವಸೆಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಳ್ತಿಲ ಗ್ರಾ.ಪಂ.ಅಧ್ಯಕ್ಷ ಸುಂದರ ಸಾಲ್ಯಾನ್ ವಹಿಸಿದ್ದರು. ವೇದಿಕೆಯಲ್ಲಿ ತಾ.ಪಂ.ಸದಸ್ಯ ದಿನೇಶ್ ಅಮ್ಟೂರು, ಸದಸ್ಯರಾದ ಅಣ್ಣು ಪೂಜಾರಿ, ಕೃಷ್ಣಪ್ಪ ಪೂಜಾರಿ, ಆನಂದ ಶೆಟ್ಟಿ, ಡಾ| ಸುಜಯ್ ಭಂಡಾರಿ, ಡಾ|ಜಯಮಾಲ, ಡಾ|ಸಭಾ, ಮಹಿಳಾ ಮಂಡಲದ ಅಧ್ಯಕ್ಷೆ ಕವಿತಾ ರಾಧಕೃಷ್ಣ, ಪೌಷ್ಟಿಕ ಆಹಾರ ಪೂರೈಕೆ ಸಂಸ್ಥೆಯ ಪ್ರತಿನಿಧಿ ಕಮಲಾಕ್ಷ, ಬಾಳ್ತಿಲ ಸ್ತ್ರೀ ಶಕ್ತಿ ಗೊಂಚಲಗಳ ಅಧ್ಯಕ್ಷೈಯರಾದ ಶೋಭಾ ಮತ್ತು ಕಸ್ತೂರಿ ಜೈನ್, ಪಿಡಿ.ಒ. ಪುಷ್ಪಾ, ಪಂ.ಕಾರ್ಯದಶರ್ಿ ಅಶೋಕ್ ಉಪಸ್ಥಿತರಿದ್ದರು.
ಅಂಗನವಾಡಿ ಮೇಲ್ವಿಚಾರಕಿ ಶಾಲಿನಿ ಸ್ವಾಗತಿಸಿ, ಅಂಗನವಾಡಿ ಕಾರ್ಯಕತರ್ೆ ಮಮತಾ ವಂದಿಸಿದರು. ಸವರ್ಾಣಿ ರೈ ಕಾರ್ಯಕ್ರಮ ನಿರೂಪಿಸಿದರು.
